ಕಳುವು ಮಾಡಿದ ಚಿನ್ನಾಭರಣ ಮಾರಾಟ ಮಾಡಿಸಲು ಯತ್ನ… ಮುಖ್ಯಪೇದೆ ಸೇರಿದಂತೆ ಇಬ್ಬರು ಮನೆಗಳ್ಳರು ಪೊಲೀಸರ ವಶಕ್ಕೆ…
- CrimeMysoreTV10 Kannada Exclusive
- September 5, 2024
- No Comment
- 2172
ಮೈಸೂರು,ಸೆ5,Tv10 ಕನ್ನಡ
ಕಳುವು ಮಾಡಿದ ಚಿನ್ನಾಭರಣಗಳನ್ನ ಸ್ವೀಕರಿಸಿ ಮಾರಾಟ ಮಾಡಿಸಲು ಯತ್ನಿಸಿದ ಆರೋಪದ ಮೇಲೆ ಮುಖ್ಯಪೇದೆಯನ್ನ ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಮನೆಗಳ್ಳರು ಸೇರಿದಂತೆ ಮೂವರ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಶೋಕ ಪುರಂ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜು ಮೇಲೆ ಆರೋಪ ಕೇಳಿ ಬಂದಿದೆ. ಇಬ್ಬರು ಮನೆಗಳ್ಳರಾದ ನಜರುಲ್ಲಾ ಬಾಬು ಮತ್ತು ಅಲೀಂ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಮೈಸೂರಿನ ವಿವಿದ ಪೊಲೀಸ್ ಠಾಣೆಗಳಲ್ಲಿ ನಡೆದ ಮನೆಗಳುವು ಪ್ರಕರಣಗಳಿಗೆ ಸಂಭಂಧಿಸಿದಂತೆ ಸುಮಾರು 400 ಗ್ರಾಂ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ.ಈ ಪೈಕಿ ಮುಖ್ಯಪೇದೆ ರಾಜು ಸುಮಾರು 300 ಗ್ರಾಂ ಚಿನ್ನಾಭರಣವನ್ನ ಸ್ವೀಕರಿಸಿದ್ದರೆಂದು ಹೇಳಲಾಗಿದೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣವೊಂದರಲ್ಲಿ ನಜರುಲ್ಲಾ ಬಾಬು ಹಾಗೂ ಅಲೀಂ ಸಿಕ್ಕಿಬಿದ್ದಿದ್ದರು.ವಿಚಾರಣೆ ವೇಳೆ ಆರೋಪಿಗಳು ದೇವರಾಜ,ಶ್ರೀರಂಗಪಟ್ಟಣ ಹಾಗೂ ಇನ್ನಿತರ ಪೊಲೀಸ್ ಠಾಣೆಯಲ್ಲಿ ಕಳುವು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಸುಮಾರು 400 ಗ್ರಾಂ ಚಿನ್ನಾಭರಣ ಕಳುವು ಮಾಡಿರುವ ಮಾಹಿತಿನೀಡಿದ್ದರು.ಅಚ್ಚರಿಯ ಸಂಗತಿ ಏನೆಂದರೆ ಕಳುವು ಮಾಡಿದ 400 ಗ್ರಾಂ ಚಿನ್ನಾಭರಣಗಳ ಪೈಕಿ ಸುಮಾರು 300 ಗ್ರಾಂ ಮುಖ್ಯಪೇದೆ ರಾಜು ಪಡೆದಿದ್ದರೆಂದು ವಿಚಾರಣೆ ವೇಳೆ ತಿಳಿದು ಬಂದಿದೆ.ಕೂಡಲೇ ಎಚ್ಚೆತ್ತ ಮಂಡಿ ಠಾಣೆ ಪೊಲೀಸರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ರವರಾದ ಮುತ್ತುರಾಜ್ ಮತ್ತು ಜಾಹ್ನವಿ ರವರ ಗಮನಕ್ಕೆ ತಂದಿದ್ದಾರೆ.ಮುಖ್ಯಪೇದೆ ರಾಜು ನನ್ನು ವಿಚಾರಣೆಗೆ ಒಳಪಡಿಸಿದಾಗ ಚಿನ್ನಾಭರಣ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶದಂತೆ ಇಬ್ಬರು ಮನೆಗಳ್ಳರು ಹಾಗೂ ಮುಖ್ಯಪೇದೆ ರಾಜು ಮೇಲೆ ಮಂಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕಳುವು ಮಾಲನ್ನ ವಶಪಡಿಸಿಕೊಂಡಿದ್ದಾರೆ.
ಮುಖ್ಯಪೇದೆ ರಾಜು ಈ ಹಿಂದೆ ಸಹ ಹಲವು ಪ್ರಕರಣಗಳಲ್ಲಿ ಶಾಮೀಲಾದ ಹಿನ್ನಲೆ ಜೈಲುವಾಸ ಅನುಭವಿಸಿದ್ದನೆಂದು ಹೇಳಲಾಗಿದೆ.ಮತ್ತು ಚೆಕ್ ಬೌನ್ಸ್ ಪ್ರಕರಣಗಳು ಸಹ ಇದೆ ಎಂದು ಹೇಳಲಾಗುತ್ತಿದೆ…