ಎರಡು ಕಾರುಗಳ ಮಧ್ಯೆ ಸಿಲುಕಿ ನಜ್ಜುಗುಜ್ಜಾದ ಸ್ಕೂಟರ್…ಮೆಡಿಕಲ್ ರೆಪ್ ಗೆ ಗಾಯ…
- CrimeMysore
- September 11, 2024
- No Comment
- 184
ಮೈಸೂರು,ಸೆ11,Tv10 ಕನ್ನಡಎರಡು ಕಾರುಗಳ ನಡುವೆ ಸ್ಕೂಟರ್ ಸಿಲುಕಿ ನಜ್ಜುಗುಜ್ಜಾದ ಘಟನೆ ಮೈಸೂರಿನಕಾಳಿದಾಸ ರಸ್ತೆಯಲ್ಲಿ ನಡೆದಿದೆ.ಇಬ್ಬರು ಸ್ಕೂಟರ್ ಸವಾರರ ಪೈಕಿ ಓರ್ವಗಾಯಗೊಂಡಿದ್ದಾನೆ.ಮೆಡಿಕಲ್ ರೆಪ್ ರತನ್ ಗಾಯಗೊಂಡ ಸ್ಕೂಟರ್ ಸವಾರ.ಮತ್ತೋರ್ವ ಸವಾರನಿಗರ ಸಣ್ಣಪುಟ್ಟ ಗಾಯಗಳಾಗಿದೆ.ಸ್ಕೂಟರ್ ಮುಂದೆ ಚಲಿಸುತ್ತಿದ್ದ ಕಾರು ನಿಂತ ವೇಳೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಎರಡು ಕಾರುಗಳ ಮಧ್ಯೆ ಸ್ಕೂಟರ್ ಸಿಲುಕಿ ನಜ್ಜುಗುಜ್ಜಾಗಿದೆ.ಸ್ಕೂಟರ್ ಚಾಲನೆ ಮಾಡುತ್ತಿದ್ದ ರತನ್ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ವಿವಿಪುರಂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…