ಗಮನ ಬೇರೆಡೆ ಸೆಳೆದು ಚಿನ್ನದ ಸರ ಲಪಟಾಯಿಸಿದ ಐನಾತಿ ಮಹಿಳೆ…
- Crime
- September 11, 2024
- No Comment
- 83
ಮೈಸೂರು,ಸೆ11,Tv10 ಕನ್ನಡ
ಮಹಿಳೆಯ ಗಮನ ಬೇರೆಡೆ ಸೆಳೆದು 40 ಗ್ರಾಂ ಚಿನ್ನದ ಸರ ಲಪಟಾಯಿಸಿದ ಘಟನೆ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.ಕುವೆಂಪುನಗರ ನಿವಾಸಿ ಜ್ಯೋತಿ ಎಂಬುವರು ಚಿನ್ನದ ಸರ ಕಳೆದುಕೊಂಡಿದ್ದಾರೆ.ತಮ್ಮ ತಾಯಿ ಮನೆಗೆ ಹೋಗಿ ಹಿಂದಿರುಗುವಾಗ ನಗರ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಒಬ್ಬಳು ಚಿಲ್ಲರೆ ಕಾಸನ್ನ ಕೆಳಗೆ ಬೀಳಿಸಿದ್ದಾಳೆ.ಎತ್ತಿಕೊಡುವಂತೆ ಜ್ಯೋತಿ ರವರಿಗೆ ಕೇಳಿದ್ದಾಳೆ.ಜ್ಯೋತಿ ರವರು ಕೆಳಗೆ ಬಿದ್ದ ಚಿಲ್ಲರೆ ಹಣ ತೆಗೆದುಕೊಡುವಾಗ ಐನಾತಿ ಮಹಿಳೆ ಕೈಚಳಕ ತೋರಿ 40 ಗ್ರಾಂ ಚಿನ್ನದ ಸರ ಲಪಟಾತಿಸಿ ಎಸ್ಕೇಪ್ ಆಗಿದ್ದಾಳೆ.ಈ ಸಂಭಂಧ ಜ್ಯೋತಿ ರವರು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…