ನ್ಯಾಯಾಲಯದ ಆದೇಶ ಗೌರವಿಸೋಣ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ : ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ*
- NewsTV10 Kannada Exclusive
- September 12, 2024
- No Comment
- 30
ಮಂಡ್ಯ,ಸೆ12,Tv10 ಕನ್ನಡ
ಬಲಿಜಿಗ ಸಮುದಾಯದ ಮುಖಂಡರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ದ ಮಾಡಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹಾಗೂ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಎಲ್.ಆರ್.ಶಿವರಾಮೇಗೌಡರು ಬಲಿಜ ಸಮುದಾಯದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರರುಗಳ ಗಮನಕ್ಕೆ ವಾಸ್ತವಾಂಶವನ್ನ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ನಮ್ಮ ಸಂಸ್ಥೆಯಾದ ರಾಯಲ್ ಕಾನ್ ಕಾರ್ಡ್ ಎಜುಕೇಷನಲ್ ಟ್ರಸ್ಟ್ 2004 ರಲ್ಲಿ ಸ್ಥಾಪಿತವಾಗಿದ್ದು, ನಾವು ರಾಯಲ್ ಕಾನ್ ಕಾರ್ಡ್ ಇಂಟರ್‌ನ್ಯಾಷನಲ್ ಸ್ಕೂಲ್ ಶೀರ್ಷಿಕೆಯಡಿಯಲ್ಲಿ ಬೆಂಗಳೂರಿನಲ್ಲಿ 6 ಶಾಲೆಗಳನ್ನು ನಡೆಸುತ್ತಿದ್ದೇವೆ .
2106 ರಲ್ಲಿ ಶ್ರೀ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ಅಂದಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಮೂರ್ತಿ ಯವರು ಹಾಗೂ ಕಾರ್ಯದಶಿಗಳಾದ ಶ್ರೀ ಲಕ್ಷಯ್ಯನವರು ಹಾಗೂ ಪದಾಧಿಕಾರಿಗಳಾದ ಶ್ರೀಮತಿ ಮುನಿಯಮ್ಮ, ವಿಶ್ರಂತ ನ್ಯಾಯಾಧೀಶರಾದ ಕೆ.ಎಸ್.ಪುಟ್ಟಸ್ವಾಮಿ, ಪೆರಿಕಲ್ ಎಂ.ಕೇಶವಮೂರ್ತಿ, ಸೀತಾರಾಮ ಚೆಟ್ಟಿ ಹಾಗೂ ಇತರ ಪದಾಧಿಕಾರಿಗಳು ನನ್ನನ್ನು ಸಂಪರ್ಕಿಸಿ ತಿಳಿಸಿದ್ದೇನೆಂದರೆ, ಸದರಿ ಶ್ರೀ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟ್, ಅಪೆಕ್ಸ್ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಸಾಲವನ್ನು ಪಡೆದಿದ್ದು ಹಾಗೂ ಅದನ್ನು ಮರುಪಾವತಿ ಮಾಡಲಾಗದೆ ಅಡಮಾನ ಮಾಡಿದ ಆಸ್ತಿಯಾದಂತಹ ನಂ.31. 1ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು. ಈ ಆಸ್ತಿಯನ್ನು ಬ್ಯಾಂಕ್‌ನವರು ಹರಾಜಿಗೆ ಹಾಕುತ್ತಾರೆ ಆದುದರಿಂದ ಶ್ರೀ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟ್ನ ಆಸ್ತಿಯನ್ನು ಬಡ ಮಕ್ಕಳಿಗೆ ಉಳಿಸುವ ಸಂಬಂಧ ನನ್ನನ್ನು ಸಂಪರ್ಕಿಸಿ ಹಣಕಾಸಿನ ಸಹಾಯವನ್ನು ಕೋರಿದರು. ಹಾಗೂ ನಾನು ಹಣಕಾಸಿನ ಸಹಾಯ ಮಾಡಿದರೆ ಮೇಲ್ಕಂಡ ಜಾಗವನ್ನು ಶಾಲೆ ನಡೆಸಲು ನಮ್ಮ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಆಶ್ವಾಸನೆ ನೀಡಿದರು. ತದನಂತರ ನಾನು ಸದರಿ ಜಾಗಕ್ಕೆ ಹೋಗಿ ನೋಡಲಾಗಿ ಅದು ಶಾಲೆಯನ್ನು ನಡೆಸಲು ಯೋಗ್ಯವಾದ ಸ್ಥಿತಿಯಲ್ಲಿರಲಿಲ್ಲ ಹಾಗೂ ಸದರಿ ಕಟ್ಟಡ ಸುಮಾರು 12 ವರ್ಷದಿಂದ ಖಾಲಿ ಉಳಿದಿದ್ದು, ನಾನು ಶಾಲೆಯನ್ನು ನಡೆಸಬೇಕಾದರೆ ಅದಕ್ಕೆ ಅಂದಿನ ಸಮಯದಲ್ಲೇ ಸುಮಾರು 20 ಕೋಟಿ ಬಂಡವಾಳವನ್ನು ವಿನಿಯೋಗಿಸಬೇಕಾಗಿತ್ತು. ನಂತರದ ಮಾತುಕತೆಗಳಲ್ಲಿ ಶ್ರೀ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ಅಂದಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಮೂರ್ತಿ ಯವರು ಹಾಗೂ ಕಾರ್ಯದಶಿಗಳಾದ ಶ್ರೀ ಲಕ್ಷಯ್ಯನವರು ಹಾಗೂ ಪದಾಧಿಕಾರಿಗಳಾದ ಶ್ರೀಮತಿ ಮುನಿಯಮ್ಮ ಹಾಗೂ ಇತರ ಪದಾಧಿಕಾರಿಗಳು ನನಗೆ ಸದರಿ ಜಾಗವನ್ನು 30 ವರ್ಷಕ್ಕೆ ಭೊಗ್ಯಕ್ಕೆ ಕೊಡುವುದಾಗಿ ತಿಳಿಸಿ ನನ್ನ ಮನವೊಲಿಸಿದರು. ಅವರು ನೀಡಿದ ಆಶ್ವಾಸನೆಗಳನ್ನು ನಂಬಿ ನಾನು ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿಗೆ ಹಣ ಸಹಾಯವನ್ನು ಮಾಡಲು ನಿರ್ಧರಿಸಿದೆ. ಮೇಲ್ಕಂಡ ವ್ಯಕ್ತಿಗಳ ಸದುದ್ದೇಶವನ್ನು ಮನಗಂಡು ಅವರು ನಮಗೆ Registered lease deed ಮಾಡಿಕೊಡುವ ಮುನ್ನವೇ ನಾನು 2016 ರಲ್ಲೇ ಅವರ ಮಾತನ್ನು ನಂಬಿ ಹಾಗೂ ಟ್ರಸ್ಟಿಗೆ ಸಹಾಯ ಮಾಡುವ ಉದ್ದೇಶದಿಂದ 2 ಕೋಟಿ ಹಣವನ್ನು ವರ್ಗಾವಣೆ ಮಾಡಿರುತ್ತೇನೆ. 2017 ರಲ್ಲಿ ನನಗೆ Registered lease deed ಮಾಡಿಕೊಟ್ಟಿದ್ದು ನಂತರ ಸುಮಾರು 20 ಕೋಟಿ ಹಣವನ್ನು ಹೂಡಿಕೆ ಮಾಡಿರುತ್ತೇನೆ. 2017 ರಲ್ಲಿ ಮೇಲ್ಕಂಡ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ಅಂದಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಮೂರ್ತಿ ಯವರು ಹಾಗೂ ಕಾರ್ಯದಶಿಗಳಾದ ಶ್ರೀ ಲಕ್ಷ್ಮಯ್ಯರವರು ಹಾಗೂ ಪದಾಧಿಕಾರಿಗಳಾದ ಶ್ರೀಮತಿ ಮುನಿಯಮ್ಮ ರವರು ನನಗೆ Registered lease deed ನ್ನು ಮಾಡಿಕೊಟ್ಟಿರುತ್ತಾರೆ. ಹಾಗೂ ಮೇಲ್ಕಂಡ ವ್ಯಕ್ತಿಗಳು ಕೇವಲ ಟ್ರಸ್ಟಿನ ಆಸ್ತಿಯನ್ನು ಬಡ ಮಕ್ಕಳಿಗೆ ಉಳಿಸುವ ಸದುದ್ದೇಶದಿಂದ ನಮ್ಮಿಂದ ಟ್ರಸ್ಟಿಗೆ ಹಣ ಪಡೆದು ಹಾಗೂ ಸದರಿ ಹಣವನ್ನು ಅಪೆಕ್ಸ್ ಬ್ಯಾಂಕ್‌ನ ಸಾಲದ ಮರುಪಾವತಿಗಾಗಿ ವಿನಿಯೋಗಿಸಿರುತ್ತಾರೆ. ನಾನು ಟ್ರಸ್ಟಿಗೆ 2ಕೋಟಿಯ ಹಣದ ಸಹಾಯ ಮಾಡಿ ಹಾಗೂ 20 ಕೋಟಿ ಹಣವನ್ನು ಹೂಡಿಕೆ ಮಾಡಿ ಶಾಲೆಯನ್ನು ನಡೆಸುತ್ತಿದ್ದೇನೆ. ನಾನು ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ಮುಖಂಡರನ್ನು 2017ನೇ ಇಸವಿಯಿಂದ ಬಾಡಿಗೆ ಕೊಡಲು ಸಂಪರ್ಕಿಸಲು ಪ್ರಯತ್ನಿಸಿದ್ದು ಆದರೆ ಅವರುಗಳು ಸಕಾರಾತ್ಮಕವಾಗಿ ಪ್ರತಿಕ್ರೀಯೇ ನೀಡಲಿಲ್ಲ. ಹೀಗಿರುವಾಗ್ಗೆ ಟ್ರಸ್ಟಿನ ಆಡಳಿತ ಮಂಡಳಿಯಲ್ಲಿ ಬದಲಾವಣೆಯಾಗಿದ್ದು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ದುರುದ್ದೇಶದಿಂದ ನಮ್ಮ ಟ್ರಸ್ಟಿಗೆ ತೊಂದರೆ ಕೊಡಲು ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ನಮಗೆ Registered lease deed ನ್ನು ಮಾಡಿಕೊಟ್ಟಿರುವುದಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡಿ, ಬಾಡಿಗೆಯನ್ನು ಸ್ವೀಕರಿಸದೆ ಬಲಿಜ ಸಮಾಜಕ್ಕೆ ನಷ್ಟವನ್ನು ಉಂಟುಮಾಡಿರುತ್ತಾರೆ. ಹಾಗೂ ನಮ್ಮ ವಿರುದ್ಧ ಕೋರ್ಟ್ನಲ್ಲಿ ದಾವೆಯನ್ನು ಹೂಡಿರುತ್ತಾರೆ ಮತ್ತು ಬಲಿಜ ಸಮುದಾಯಕ್ಕೆ ಸುಳ್ಳು ಮಾಹಿತಿಗಳನ್ನು ನೀಡಿರುತ್ತಾರೆ. ನಾನು ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟ್ಗೆ 2 ಕೋಟಿ ಹಣವನ್ನು ನಮ್ಮ ಸಂಸ್ಥೆಯಾದ ರಾಯಲ್ ಕಾನ್‌ಕಾರ್ಡ್ ಎಜುಕೇಷನಲ್ ಟ್ರಸ್ಟ್ನ ಖಾತೆಯಿಂದ RTGS ಮುಖಾಂತರ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟ್ನ ಖಾತೆ, state bank of travancore ಖಾತೆಗೆ ಈ ಕೆಳಕಂಡAತೆ ನೀಡಲಾಗಿದೆ. ೧) RTGS ಮುಖಾಂತರ ರೂ.1.00.00.000/-(ಒಂದು ಕೋಟಿ ರೂಪಾಯಿ) ದಿನಾಂಕ: ೧೮/೦೪/೨೦೧೬ ರಂದು ನೀಡಲಾಗಿದೆ. ೨) RTGS ಮುಖಾಂತರ ರೂ. 50,೦೦,೦೦೦/-(ಐವತ್ತು ಲಕ್ಷ ರೂಪಾಯಿ) ದಿನಾಂಕ: ೦೭/೦೬/೨೦೧೬ ರಂದು ನೀಡಲಾಗಿದೆ. ೩) RTGS ಮುಖಾಂತರ ರೂ. 50,೦೦,೦೦೦/-(ಐವತ್ತು ಲಕ್ಷ ರೂಪಾಯಿ) ದಿನಾಂಕ: ೦೯/೦೬/೨೦೧೬ ರಂದು ನೀಡಲಾಗಿದೆ. ಇವರು ನಿರಂತರವಾಗಿ ನನಗೆ ತೊಂದರೆ ಕೊಟ್ಟಿದ್ದರಿಂದ ಮಕ್ಕಳ ದಾಖಲಾತಿ ಕಡಿಮೆಯಾಗಿ ನನಗೆ ಸಾಕಷ್ಟು ನಷ್ಟ ಉಂಟಾಗಿರುತ್ತದೆ. ಹೀಗಿದ್ದರೂ ಕೂಡ ಮೇಲ್ಕಂಡ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ದುರುದ್ದೇಶದಿಂದ ದಿನಾಂಕ:೧೩/೦೯/೨೦೨೪ ರಂದು ನಮ್ಮ ಶಾಲೆಯ ಆವರಣದಲ್ಲಿ ನನ್ನ ವಿರುದ್ಧವೇ ಪ್ರತಿಭಟನೆಯನ್ನು ನಡೆಸಲು ಹುನ್ನಾರ ಮಾಡಿರುತ್ತಾರೆ. ನಮ್ಮ ಶಾಲೆಯ ಪರವಾಗಿ ಮಾನ್ಯ ನ್ಯಾಯಾಲಯ stay order ನ್ನು ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ವಿರುದ್ಧ ನೀಡಿರುತ್ತಾರೆ. ಟ್ರಸ್ಟ್ಗೆ ಕೆಲವು ವ್ಯಕ್ತಿಗಳ ವೈಯಕ್ತಿಕ ಒಳಸಂಚಿನಿಂದ ತಿಮ್ಮಯ್ಯ ಚಾರಿಟೆಬಲ್ ಬರಬೇಕಾದ ವರಮಾನವನ್ನು ಪಡೆದುಕೊಳ್ಳದೆ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಬಾಡಿಗೆ ನೀಡಿಲ್ಲ ಎಂದು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಹಲವಾರು ಶಾಲೆಗಳನ್ನು ನಡೆಸುತ್ತಿದ್ದು, ನೂರಾರು ಮಂದಿಗೆ ಸಂಬಳವನ್ನು ಪಾವತಿ ಮಾಡುತ್ತಿದ್ದು, ನಾನು ಈಗಲೂ ಕೂಡ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ಮೂಲ ಉದ್ದೇಶವನ್ನು ನೆರವೇರಿಸಲು ಹಾಗೂ ಬಡ ಮಕ್ಕಳಿಗೆ ಸಹಾಯ ಮಾಡಲು ಸಿದ್ಧನಿದ್ದೇನೆ. ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ಯಾವುದೇ ಮುಖಂಡರ ಜೊತೆ ಸಮಸ್ಯೆಯನ್ನು ಬಗೆಹರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.