ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ ಕೆ.

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ ಕೆ.



ಮೈಸೂರು, ಸೆಪ್ಟೆಂಬರ್. 19-ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರನ್ನಾಗಿ ಸಾಹಿತ್ಯೇತರ ವ್ಯಕ್ತಿಯನ್ನೂ ಅಧ್ಯಕ್ಷರನ್ನಾಗಿಸುವುದು ಬೇಡ ಎಂದು ಹಿರಿಯ ಸಾಹಿತಿ ಡಾ. ಸಿ. ಪಿ ಕೆ ಅವರು
ಕಸಾಪ ರಾಜ್ಯ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಒತ್ತಾಯಿಸಿದ್ದಾರೆ.
ಅವರು ಇಂದು ಸಂಜೆ ಜಲದರ್ಶಿನಿಯಲ್ಲಿ ಕರೆಯಲಾಗಿದ್ದ ಕನ್ನಡ ಪರ ಸಂಘಟನೆಗಳ ನಾಯಕರ ತುರ್ತು ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಸಾಹಿತ್ಯೇತರ ವ್ಯಕ್ತಿಯನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡುವ ಹೇಳಿಕೆಯನ್ನು ಖಂಡಿಸಿ ಮಾತನಾಡುತ್ತ, ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧ ಪಡದವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎನ್ನುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರ ಮಾತು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಕನ್ನಡ ಸಮಾವೇಶ ಅಥವಾ ಕನ್ನಡ ಸಮ್ಮೇಳನ ಅಂತ ಬೇಕಾದರೆ ಮಾಡಿ ಯಾ ವುದಾದರು ಕ್ಷೇತ್ರದವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ. ಆದರೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎನ್ನುವುದು
ಮೂರ್ಖತನದ ಪರಮಾವಧಿಯದು ಎಂದು ಆಕ್ಷೇಪಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳೇ ಆಯ್ಕೆ ಮಾಡದಿದ್ದರೆ, ಇನ್ನಾವ ಪುರುಷಾರ್ತಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ, ಕೋಟ್ಯಂತರ ರೂಪಾಯಿ ಸರ್ಕಾರದ ಹಣ ಪೋಲು ಮಾಡಬೇಕು ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕನ್ನಡ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ ಗೌಡ, ನಿನ್ನೆ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರ ಹೇಳಿಕೆ ಕೇಳಿ ಆಶ್ಚರ್ಯ ಅಘಾತ ಒಟ್ಟೋಟ್ಟಿಗೆ ಆಯಿತು. ಕನ್ನಡ ನೆಲ ಭಾಷೆಗೆ ಈಗ ಎದುರಾಗಿರುವ ಆಪತ್ತುಗಳಿಂದ ಕನ್ನಡಿಗರು ಚೇತರಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಕನ್ನಡ ಸಾಹಿತ್ಯ ರಕ್ಷಿಸಿ ಪೋಷಿಸಬೇಕಾದ ಪರಿಷತ್ತಿನ ರಾಜ್ಯಾಧ್ಯಕ್ಷರು ತಲೆ ಕೆಟ್ಟವರಂತೆ ಮಾತಾಡುತ್ತಿರುವುದು ಅಸಹ್ಯಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಾಜರಿದ್ದ, ಕುವೆಂಪು ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಅಧ್ಯಕ್ಷ ಎಂ. ಜೆ. ಸುರೇಶ ಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ಹೇಳಿಕೆ ಹೇಗಿದೆ ಎಂದರೆ, ಕನ್ನಡದಲ್ಲಿ ಸಾಹಿತಿಗಳೇ ಇಲ್ಲಾ, ಅದಕ್ಕಾಗಿ ಬೇರೆ ಕ್ಷೇತ್ರದವರನ್ನು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಅನ್ನಿಸುತ್ತೆ. ಇದು 8 ಜ್ಞಾನ ಪೀಠ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕನ್ನಡ ಸರಸ್ವತಿಗೇ ಮಾಡಿದ ಅವಮಾನದಂತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ . ರವಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರು ಸಾಹಿತ್ಯೇತರ ವ್ಯಕ್ತಿಯನ್ನು ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ರನ್ನಾಗಿ ಮಾಡುವ ಅವಿವೇಕಿ ನಿರ್ಧಾರವನ್ನು ಕೈ ಬಿಟ್ಟು ಮಂಡ್ಯದವರೇ ಆದ ಕರ್ನಾಟಕ ಸಂಘದ ಡಾ. ಜಯ ಪ್ರಕಾಶ್ ಗೌಡ, ಸಾಹಿತಿ ರಾ ಗೌ ಅಥವಾ ಮಂಡ್ಯ ಮೂಲದ ಕವಯತ್ರಿ ಡಾ. ಲತಾ ರಾಜಶೇಖರ್ ಅವರಂಥ ಉನ್ನತ ಸಾಹಿತಿಗಳನ್ನು ಈ ಬಾರಿಯ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ಸಾಹಿತ್ಯ ಬೆಳೆಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರು ಮಾಡಬೇಕೆಂದು ಕಿವಿ ಮಾತು ಹೇಳಿದರು.
ಕೊನೆಯಲ್ಲಿ ಮಾತನಾಡಿದ ವಿಶ್ರಾಂತ ಪತ್ರಕರ್ತ ಹಾಗೂ ಲೇಖಕ ಎಸ್. ಪ್ರಕಾಶ್ ಬಾಬು ಮಾತನಾಡಿ, ಕೆಟ್ಟ ರಾಜಕಾರಣ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನೇ ಹಾಳು ಮಾಡುವ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಇದರ ದುಷ್ಟಪರಿಣಾಮದಿಂದಾಗಿಯೇ ಕೆಟ್ಟ ಸಂಪ್ರದಾಯಕ್ಕೆ ಈಗಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಕೈ ಹಾಕುತ್ತಿದ್ದಾರೆ . ಇದರ ವಿರುದ್ಧ ಕನ್ನಡಿಗರೆಲ್ಲ ಒಗ್ಗಟ್ಟಾಗಿ ಪ್ರತಿಭಟಿಸಬೇಕೆಂದು ಕರೆ ಕೊಟ್ಟರು.
ಅಂತಿಮವಾಗಿ ಸಭೆಯಲ್ಲಿ ಹಾಜರಿದ್ದ ಕನ್ನಡ ಪರ ಸಂಘಟನೆಗಳ ನಾಯಕರು ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ವ್ಯಕ್ತಿಗಳನ್ನು ಆಯ್ಕೆ ಮಾಡಲು ಉದ್ದೇಶಿಸಿರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಕನ್ನಡಿಗರು ಹೋರಾಟಕ್ಕೆ ಇಳಿದು, ಕನ್ನಡ ಸಾಹಿತ್ಯ ರಕ್ಷಣೆ ಮಾಡಬೇಕು ಇದಕ್ಕಾಗಿ ಪ್ರತಿ ದಿನ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಆರಂಭಿಸಿ, ಅಂತಿಮವಾಗಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಮುಂದೆಯೇ ಉಗ್ರ ಪ್ರತಿ ಭಟನೆ ನಡೆಸುವ ಎಂದು ನಿರ್ಣಯ ಅಂಗೀಕರಿಸಲಾಯಿತು.

ಇಂತಿ ನಿಮ್ಮ
ಎ. ರವಿ
ನಿರ್ದೇಶಕರು
ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ
ಪ್ರಧಾನ ಕಾರ್ಯದರ್ಶಿ
ಮೈಸೂರು ಜಿಲ್ಲಾ ಪತ್ರಿಕಾ ಪ್ರತಿ ನಿಧಿಗಳ ಸಂಘ
ನನ್ನ ವಾರ್ಡು ನನ್ನ ಕನಸು
ವಾರ್ಡ್ ನಂಬರ್ 20 ವಿಜಯನಗರ

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *