ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?
- TV10 Kannada Exclusive
- September 20, 2024
- No Comment
- 88
ಮೈಸೂರು,ಸೆ20,Tv10 ಕನ್ನಡ
ವಿಘ್ನನಿವಾರಕ ಗಣಪತಿ ಹಬ್ಬ ನಾಡಿನ ಮೂಲೆ ಮೂಲೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ರಸ್ತೆ ರಸ್ತೆಗಳಲ್ಲೂ ವಿವಿಧ ಆಕಾರಗಳಲ್ಲಿ ವಿಗ್ರಹಗಳು ಭಕ್ತರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ವಿಸರ್ಜನೆಗಾಗಿ ಹಮ್ಮಿಕೊಳ್ಳುವ ಮೆರವಣಿಗೆಗಳಂತೂ ಜಂಬೂಸವಾರಿಯನ್ನೂ ನಾಚಿಸಯವಂತೆ ನಡೆದಿವೆ.ಆದರೆ ಗಣಪತಿ ಮೂರ್ತಿಗಳ ವಿಸರ್ಜನೆಯಲ್ಲಿ ಭಕ್ತರು ಎಡವುತ್ತಿದ್ದಾರೆ.ಸಂಪ್ರದಾಯಿಕವಾಗಿ ವಿಸರ್ಜಿಸದೆ ಗಣಪತಿ ವಿಗ್ರಹಗಳಿಗೆ ಅಪಚಾರ ಮಾಡುತ್ತಿದ್ದಾರೆ.ಕೆ.ಆರ್.ಎಸ್.ಮುಖ್ಯರಸ್ತೆಯ ಪಂಪ್ ಹೌಸ್ ಬಳಿ ಇರುವ ಆರ್.ಬಿ.ಎಲ್ ನಾಲೆಯಲ್ಲಿ ವಿಸರ್ಜಿಸಲಾದ ಬೃಹತ್ ಆಕಾರದ ಗಣಪತಿ ಮೂರ್ತಿಗಳು ನೀರಿನಲ್ಲಿ ಕರಗದೆ,ತೇಲದೆ,ಮುಳುಗದೆ ಅನಾಥವಾದಂತೆ ಭಾಸವಾಗುತ್ತಿವೆ.ಗಣಪತಿಗಳನ್ನ ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನ ನಡೆಸಿದ ನಂತರ ಸಂಪ್ರದಾಯಿಕವಾಗಿ ವಿಸರ್ಜಿಸುವುದು ಆಚರಣೆಯಲ್ಲಿದೆ.ಆದ್ರೆ ಇಲ್ಲಿ ಆಚರಣೆಯನ್ನ ಬದಿಗೊತ್ತಿ ಬೇಕಾಬಿಟ್ಟಿ ನಾಲೆಯಲ್ಲಿ ಬಿಸಾಡಿ ಹೋಗುವ ಅವ್ಯಸ್ಥೆ ನಡೆದುಕೊಂಡು ಬಂದಿದೆ.ನಾಲೆಯ ಮಧ್ಯದಲ್ಲಿ ಸಿಲುಕಿದ ಗಣಪತಿ ವಿಗ್ರಹಗಳಿಗೆ ಮೋಕ್ಷ ಸಿಗದೆ ಅವ್ಯಸ್ಥೆಗೆ ಮೂಕಸಾಕ್ಷಿಯಾಗಿ ನಿಂತಿವೆ.ಇದರಿಂದ ಪರಿಸರಕ್ಕೂ ಹಾನಿ,ಜಲಚರಗಳಿಗೂ ಸಂಕಷ್ಟ,ನೀರು ಕಲುಷಿತವಾಗುವ ಭೀತಿ ಇದೆ.ನಾಲೆಗಳನ್ನ ಸಂರಕ್ಷಿಸಬೇಕಾದ ನೀರಾವರಿ ಇಲಾಖೆ ಅಧಿಕಾರಿಗಳು ಇದನ್ನ ಗಂಭೀರವಾಗಿ ಪರಿಗಣಿಸಿ ಇಂತಹ ಅವೈಜ್ಞಾನಿಕ ವಿಸರ್ಜನೆಗೆ ಕಡಿವಾಣ ಹಾಕಬೇಕಿದೆ…