ಮೈಸೂರಿನಲ್ಲಿ ಹನಿ ಟ್ರಾಪ್…ಪಾನಿಪುರಿ ವ್ಯಾಪಾರಿಯಿಂದ 75 ಸಾವಿರ ಸುಲಿಗೆ…ಮಹಿಳೆ,ರೌಡಿಶೀಟರ್ ಸೇರಿದಂತೆ ಐವರ ಬಂಧನ…

ಮೈಸೂರಿನಲ್ಲಿ ಹನಿ ಟ್ರಾಪ್…ಪಾನಿಪುರಿ ವ್ಯಾಪಾರಿಯಿಂದ 75 ಸಾವಿರ ಸುಲಿಗೆ…ಮಹಿಳೆ,ರೌಡಿಶೀಟರ್ ಸೇರಿದಂತೆ ಐವರ ಬಂಧನ…

ಮೈಸೂರು,ಅ1,Tv10 ಕನ್ನಡ

ಸಾಂಸ್ಕೃತಿಕ ನಗರಿಯಲ್ಲಿ ಹನಿಟ್ರಾಪ್ ಪ್ರಕರಣ ದಾಖಲಾಗಿದೆ.ಪಾನಿಪುರಿ ವ್ಯಾಪಾರಿಯೊಬ್ಬರನ್ನ ಟ್ರಾಪ್ ಮಾಡಿದ ತಂಡ 75 ಸಾವಿರ ಸುಲಿಗೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.

ನಂಜನಗೂಡಿನ ನಿವಾಸಿ ಪಾನಿಪುರಿ ವ್ಯಾಪಾರಿ ಮದನ್ ಲಾಲ್ ಗಯಾರಿ ಹನಿಟ್ರಾಪ್ ಗೆ ಒಳಗಾದವರು.ಕುಖ್ಯಾತ ರೌಡಿ ಶೀಟರ್ ಸೈಯದ್ ಶಾಬಾಜ್,ನೇಹಾ,ಸೈಯದ್ ಮುದಾಸರ್,ಕಫೀಉಲ್ಲಾ,ಸಿದ್ದಿಖ್ ಬಂಧಿತರು.ಡಕಾಯಿತಿ,ಕಳ್ಳತನ,ಸುಲಿಗೆ,ಕೊಲೆ ಬೆದರಿಕೆ,ವಾಹನ ಕಳುವು ಸೇರಿದಂತೆ 14 ಪ್ರಕರಣಗಳನ್ನ ಎದುರಿಸುತ್ತಿರುವ ಸೈಯದ್ ಶಾಬಾಜ್ ಕೃತ್ಯದ ರೂವಾರಿ.ನೇಹಾಳನ್ನ ಬಳಸಿಕೊಂಡ ಸೈಯದ್ ಶಾಬಾಜ್ ಪಾನಿಪುರ ವ್ಯಾಪಾರಿಯನ್ನ ಬುಟ್ಟಿಗೆ ಹಾಕಿಕೊಂಡಿದ್ದಾನೆ.ನೇಹಾ ಮೂಲಕ ರಮಾಬಾಯಿನಗರಕ್ಕೆ ಪಾನಿಪುರಿ ವ್ಯಾಪಾರಿಯನ್ನ ಕರೆಸಿ ಮನೆಯೊಂದರಲ್ಲಿ ಟ್ರಾಪ್ ಮಾಡಿದ್ದಾರೆ.ನೇಹಾಳೊಂದಿಗೆ ಬೆತ್ತಲೆ ಫೋಟೋ ತೆಗೆದು ನಂತರ ಹಣಕ್ಕೆ ಬ್ಲಾಕ್ ಮೇಲ್ ಮಾಡಿದ್ದಾರೆ.ಜುಲೈ ತಿಂಗಳಲ್ಲಿ ಮದನ್ ಲಾಲ್ ಗಯಾರಿಯನ್ನ ಟ್ರಾಪ್ ಮಾಡಿ ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ಹಣ ಕೊಡದಿದ್ದಲ್ಲಿ ಬೆತ್ತಲೆ ಇರುವ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.ಗೌರವಕ್ಕೆ ಹೆದರಿದ ಮದನ್ ಲಾಲ್ ಗಯಾರಿ ಹಂತ ಹಂತವಾಗಿ 75800/- ರೂ ಕೊಟ್ಟಿದ್ದಾರೆ.ನಂತರವೂ ಹಣದ ಬೇಡಿಕೆ ಹೆಚ್ಚಾದಾಗ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ನೇಹಾ,ಸೈಯದ್ ಮುದಾಸರ್,ಕಫೀಉಲ್ಲಾ,ಸಿದ್ದಿಖ್ ರನ್ನ ಬಂಧಿಸಿದ್ದರು.ಪ್ರಮುಖ ಆರೋಪಿ ಸೈಯದ್ ಶಾಬಾಜ್ ತಲೆ ಮರೆಸಿಕೊಂಡಿದ್ದ.ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಸೈಯದ್ ಶಾಬಾಜ್ ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
8 ಮಂದಿ ತಂಡದಿಂದ ಕೃತ್ಯ ನಡೆದಿದ್ದು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.ಪರಾರಿಯಾದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಎಲ್.ಶೇಖರ್,ಪಿಎಸ್ಸೈ ಚಂದ್ರ ನೇತೃತ್ವದಲ್ಲಿ ಕೆ.ಎ.ಸಿಬ್ಬಂದಿಗಳಾದ ಮಹೇಶ್,ಸುನಿಲ್ ಕುಮಾರ್,ಪ್ರಕಾಶ್,ಮಂಜು,ಪವನ್ ಕುಮಾರ್ ಹಾಗೂ ಸಂಜಯ್ ರವರು ಆರೋಪಿಗಳ ಬಂಧನ ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…

Spread the love

Related post

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್ ಮೈಸೂರು,ಅ13,Tv10 ಕನ್ನಡ ದಸರಾ ವೇಳೆ ಅನಾಹುತ ಸೃಷ್ಠಿಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ…
ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…

Leave a Reply

Your email address will not be published. Required fields are marked *