ಯೋಗನರಸಿಂಹ ಸ್ವಾಮಿ ದೇಗುಲಕ್ಕೆ ಮೇಘಾಲಯ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಭೇಟಿ…
- TV10 Kannada Exclusive
- October 7, 2024
- No Comment
- 60
ಮೈಸೂರು,ಅ7,Tv10 ಕನ್ನಡ
ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹ ದೇವಾಲಯಕ್ಕೆ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಸಿಹೆಚ್ ವಿಜಯ್ ಶಂಕರ್ ಭೇಟಿ ನೀಡಿದ್ದರು.
ದೇಗುಲದ ಟ್ರಸ್ಟ್ ವತಿಯಿಂದ ಶ್ರೀ ಬಾಷ್ಯಂ ಸ್ವಾಮಿಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಲಾಯಿತು. ಯೋಗ ನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದಸರಾ ಪೂಜಾಕೈಂಕರ್ಯದ ಭಾಗವಾದ ಸುದರ್ಶನ ಹೋಮದ ಸಂಕಲ್ಪ ಪೂಜೆಗೆ
ದೇಗುಲದ ಆವರಣದಲ್ಲಿ ಬೃಹತ್ ಅಗರಬತ್ತಿಗೆ ಜ್ಯೋತಿ ಹೊತ್ತಿಸುವ ಮೂಲಕ ಚಾಲನೆ ನೀಡಿದರು.
ದಸರಾ ವೇಳೆಯಲ್ಲಿ ನೆಡೆಯುವ ದ್ವಾದಶ ದಿನಗಳ ಈ ಪೂಜಾಕೈಂಕರ್ಯದಲ್ಲಿ ಇದೆ ಶನಿವಾರ ಸುದರ್ಶನ ಹೋಮ ಜರುಗಲಿದ್ದು ವಿಜಯದಶಮಿ ದಿನ ಮಹಾ ಅಭಿಷೇಕ ಪೂಜೆ ನೆಡೆಯಲಿದ್ದು ದೇಗುಲದ ಶುದ್ದಿ ನೆಡೆಸಲಾಗುವುದು ಎಂದು ದೇಗುಲದ ಹಿರಿಯ ಅರ್ಚಕ ಶ್ರೀನಿವಾಸ್ ರವರು ಮಾಹಿತಿ ನೀಡಿದರು…