ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ…ಭಾವಿಪತಿಯೇ ಕೊಲೆ ಮಾಡಿರುವ ಆರೋಪ…

ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ…ಭಾವಿಪತಿಯೇ ಕೊಲೆ ಮಾಡಿರುವ ಆರೋಪ…

ಹೆಚ್.ಡಿ.ಕೋಟೆ,ಅ6,Tv10 ಕನ್ನಡ

ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೆಚ್.ಡಿ.ಕೋಟೆ ತಾಲೂಕು ಹಿರೆಹಳ್ಳಿಯಲ್ಲಿ ನಡೆದಿದೆ.ನಿಶ್ಚಿತಾರ್ಥ ಮಾಡಿಕೊಂಡ ಭಾವಿ ಪತಿಯೇ ಕೊಂದು ನೇಣು ಹಾಕಿರುವುದಾಗಿ ಯುವತಿಯ ಪೋಷಕರು ಆರೋಪಿಸಿದ್ದಾರೆ.
ಕವಿತ (20) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದುರ್ದೈವಿ.
ಕವಿತಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜಗ ಅಲಿಯಾಸ್ ನಿರಂಜನ್ ಕವಿತಳನ್ನು ನೇಣು ಬಿಗಿದು ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.ಮೂರು ತಿಂಗಳ ಹಿಂದೆ ಕವಿತ ಮತ್ತು ಜಗ ಮದುವೆ ನಿಶ್ಚಯವಾಗಿತ್ತು.
ಇದೇ ತಿಂಗಳ 22ರಂದು ಎಚ್.ಡಿ.ಕೋಟೆ ಪಟ್ಟಣದ ಜೆಎಸ್ ಎಸ್ ಮಂಗಳ ಮಂಟಪದಲ್ಲಿ ಇಬ್ಬರೂ ಸತಿಪತಿಗಳಾಗಬೇಕಿತ್ತು.
ಕವಿತ ಮನೆಯಲ್ಲಿದ್ದಾಗ ಸಂಜೆ ನಾಲ್ಕುಗಂಟೆ ಸಮಯದಲ್ಲಿ ಜಗ ಮನೆಗೆ ಬಂದಿದ್ದಾನೆ. ಕವಿ‌ತಳನ್ನು ಕೊಂದು ಮನೆಯ ಮೇಲ್ಚಾವಣಿಗೆ ನೇತುಹಾಕಿ ಮನೆಯಲ್ಲಿದ್ದ ಎರಡು ಲಕ್ಷ ನಗದು ಸಮೇತ ಹಾಗೂ ನಿಶ್ಚಿತಾರ್ಥದ ಪೋಟೋ ಮತ್ತು ಕವಿತ ಮೊಬೈಲ್ ಸಮೇತ ಜಗ ಪರಾರಾಯಾಗಿದ್ದಾನೆಂದು ಆರೋಪಿಸಿದ್ದಾರೆ.

ಕವಿತ ಪೋಷಕರ ದೂರಿನ ಮೇಲೆ ಎಚ್.ಡಿ.ಕೋಟೆ ಪೊಲೀಸರು ಆರೋಪಿ ಜಗನನ್ನು ಬಂಧಿಸಿದ್ದಾರೆ..

Spread the love

Related post

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…
ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ… ಮೈಸೂರು,ಸೆ15,Tv10 ಕನ್ನಡ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು…

Leave a Reply

Your email address will not be published. Required fields are marked *