ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…
- Crime
- October 18, 2024
- 1 Comment
- 169
ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…
ಹುಣಸೂರು,ಅ18,Tv10 ಕನ್ನಡ
ಹಳೇ ವೈಷಮ್ಯ ಹಿನ್ನಲೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೃಷಿ ಕೂಲಿ ಕಾರ್ಮಿಕ ಪ್ರಮೋದ್ ಅಲಿಯಾಸ್ ರಾಜು(27) ಚಾಕು ಇರಿತಕ್ಕೊಳಗಾದ ಯುವಕ.ಗಾಯಗೊಂಡ ಪ್ರಮೋದ್ ಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೇ ಗ್ರಾಮದ ಕುರಿ ವ್ಯಾಪಾರಿ ಕುಮಾರನಾಯ್ಕ ಎಂಬಾತ ಚಾಕುವಿನಿಂದ ಇರಿದಿದ್ದಾನೆ.
ಹಣಕಾಸು ವಿಚಾರದಲ್ಲಿ ಪ್ರಮೋದ್ ಮತ್ತು ಕುಮಾರನಾಯ್ಕ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.ಇದೇ ಹಳೇ ವೈಷಮ್ಯದಿಂದ ನಿನ್ನೆ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪ್ರಮೋದ್ ಮೇಲೆ ಕುಮಾರನಾಯ್ಕ ದಾಳಿ ಮಾಡಿದ್ದಾನೆ.
ಪ್ರಮೋದ್‌ನ ಎಡಗೈ ಭಾಗಕ್ಕೆ ಕುಮಾರನಾಯ್ಕ ಚಾಕುವಿನಿಂದ ತಿವಿದಿದ್ದಾನೆ.ಈ ವೇಳೆ ಸ್ಥಳೀಯರು ಪ್ರಮೋದ್‌ನನ್ನ ರಕ್ಷಿಸಿದ್ದಾರೆ.ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಕುಮಾರನಾಯ್ಕನನ್ನ ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
1 Comments
Definitely, what a splendid site and informative posts, I surely will bookmark your website.Best Regards!