
ರಕ್ತದ ಮಡುವಿನಲ್ಲಿ ಯುವಕ ಪತ್ತೆ…ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು…ಘಟನಾ ಸ್ಥಳದಲ್ಲಿ ನಿಂಬೆಹಣ್ಣು,ಎಲೆ ಅಡಿಕೆ,101 ರೂ ಪತ್ತೆ…ವಾಮಾಚಾರ ಮಾಡಿ ಕೊಲೆ ಶಂಕೆ…
- Crime
- October 18, 2024
- No Comment
- 142

ರಕ್ತದ ಮಡುವಿನಲ್ಲಿ ಯುವಕ ಪತ್ತೆ…ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು…ಘಟನಾ ಸ್ಥಳದಲ್ಲಿ ನಿಂಬೆಹಣ್ಣು,ಎಲೆ ಅಡಿಕೆ,101 ರೂ ಪತ್ತೆ…ವಾಮಾಚಾರ ಮಾಡಿ ಕೊಲೆ ಶಂಕೆ…
ನಂಜನಗೂಡು,ಅ18,Tv10 ಕನ್ನಡ
ಕತ್ತು ಕೊಯ್ದ ಪರಿಣಾಮ ರಕ್ತದ ಮಡುವಿನಲ್ಲಿ ವ್ಯಕ್ತಿ ನರಳಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಮೀಪ ನಡೆದಿದೆ.ವ್ಯಕ್ತಿಯನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.ಹುಣ್ಣಿಮೆ ಹಿನ್ನಲೆ ವಾಮಾಚಾರ ನಡೆಸಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಇದರ ಕುರುಹಾಗಿ ಸ್ಥಳದಲ್ಲಿ ಮಂತ್ರಿಸಿರುವ ನಿಂಬೆಹಣ್ಣು,101 ರೂ ನಗದು,ಎಲೆ ಅಡಿಕೆ ಕಂಡುಬಂದಿದೆ.ಮಾಲ್ಕುಂಡಿ ಗ್ರಾಮದ ಸದಾಶಿವ(43) ಮೃತ ವ್ಯಕ್ತಿ.ಪ್ರೌಢ ಶಾಲೆಯ ಸಮೀಪ ನೀರು ಹರಿಯುವ ಹಳ್ಳದಲ್ಲಿ ನರಳಾಡುತ್ತಿದ್ದ ದೃಶ್ಯ ಸ್ಥಳೀಯರೊಬ್ಬರ ಕಣ್ಣಿಗೆ ಬಿದ್ದಿದೆ.ನಂತರ ಹುಲ್ಲಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.ಪಿಎಸ್ಸೈ ಚೇತನ್ ಕುಮಾರ್ ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಆಗಮಿಸಿ ನರಳಾಡುತ್ತಿದ್ದ ಸದಾಶಿವ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಆದರೆ ಮಾರ್ಗಮಧ್ಯೆ ಸದಾಶಿವ ಸಾವನ್ನಪ್ಪಿದ್ದಾರೆ.ವಾಮಾಚಾರ ಮಾಡಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ…