ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವು…ಚಾಮರಾಜನಗರದಲ್ಲಿ ದುರಂತ ಘಟನೆ…
- TV10 Kannada Exclusive
- October 24, 2024
- No Comment
- 22
ಚಾಮರಾಜನಗರ,ಅ24,Tv10 ಕನ್ನಡ
ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವನ್ನಪ್ಪಿದ ದುರಂತ ಘಟನೆ ಚಾಮರಾಜನಗರದ ಅಯ್ಯನಪುರ ಗ್ರಾಮದಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ರಸ್ತೆಗೆ ಅಡ್ಡಲಾಗಿ ಜೋತುಕೊಂಡಿದ್ದ ವಿದ್ಯುತ್ ತಂತಿ ಸ್ಪರ್ಶಸಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಾಗೇಂದ್ರ (48) ಮತ್ತು ಮಲ್ಲೇಶ್ (40) ಮೃತ ದುರ್ದೈವಿಗಳು.
ಅಯ್ಯನಪುರ-ಹಿತ್ತಲಗುಡ್ಡೆ ರಸ್ತೆಯಲ್ಲಿ ತೆರಳುತ್ತಿದ್ದಾಗ ದುರಂತ ನಡೆದಿದೆ.ಸ್ಥಳಕ್ಕೆ ರಾಮಸಮುದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರದ.
ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗಿದ್ದು
ಸೂಕ್ತ ಪರಿಹಾರಕ್ಕಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ…