
ಸ್ನಾನ ಮಾಡಲು ಬಂದ ವ್ಯಕ್ತಿ ದೇವಿಕೆರೆಯಲ್ಲಿ ಬಿದ್ದು ಸಾವು…ಹುಟ್ಟುಹಬ್ಬ ಮುನ್ನಾ ದಿನ ಮಸಣಕ್ಕೆ…
- TV10 Kannada Exclusive
- October 25, 2024
- No Comment
- 181
ಮೈಸೂರು,ಅ25,Tv10 ಕನ್ನಡ
ಹುಟ್ಟುಹಬ್ಬ ಮುನ್ನಾ ದಿನ ನಾಡದೇವಿಯ ದರುಶನ ಪಡೆಯಲು ಬಂದ ವ್ಯಕ್ತಿ ದೇವಿಕೆರೆ ಪಾಲಾಗಿದ್ದಾರೆ.ದೇವಿಯ ಆರಾಧಕರಾದ ಬೆಂಗಳೂರು ಮೂಲದ ಚೇತನ್ (27) ಮೃತ ದುರ್ದೈವಿ.ಮೃತ ಚೇತನ್ ಬೆಂಗಳೂರಿನ ಬಳಗೇರಿ ನಿವಾಸಿ ಎಂದು ಹೇಳಲಾಗಿದೆ.
ನಾಳೆ ಚೇತನ್ ರವರ ಜನ್ಮದಿನ.ಅಲ್ಲದೆ ಇವರು ದೇವಿಯ ಆರಾಧಕರೂ ಸಹ ಆಗಿದ್ದಾರೆ.ಹುಟ್ಟುಹಬ್ಬದ ಮುನ್ನಾ ದಿನ ನಾಡದೇವಿಯ ದರುಶನ ಪಡೆಯಲು ತಮ್ಮ ನಾಲ್ಕು ಜನ ಸ್ನೇಹಿತರೊಂದಿಗೆ ಬಂದು ಚಾಮುಂಡಿ ಬೆಟ್ಟದ ವಸತಿಗೃಹದಲ್ಲಿ ತಂಗಿದ್ದಾರೆ.ಇಂದು ಮುಂಜಾನೆ ದೇವೆಕೆರೆಯಲ್ಲಿ ಸ್ನಾನ ಮಾಡಲು ತೆರಳಿದ ವೇಳೆ ಆಕಸ್ಮಿಕವಾಗಿ ಜಾರಿ ನೀರುಪಾಲಾಗಿದ್ದಾರೆ.ಇಂದು ಬೆಳಿಗ್ಗೆ ದೇವರ ಶುದ್ದಿಗಾಗಿ ಕೆರೆಯಿಂದ ನೀರು ತರಲು ಅರ್ಚಕರು ಬಂದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.ಕೆ.ಆರ್.ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ…