ಸಾಧಕರಿಗೆ ಡಾ.ಪುನೀತ್ ರಾಜರತ್ನ ಪ್ರಶಸ್ತಿ ಪ್ರಧಾನ…ಮಲೆಮಹದೇಶ್ವರ ಸೇವಾ ಸಂಸ್ಥೆಯಿಂದ ಕಾರ್ಯಕ್ರಮ…
- TV10 Kannada Exclusive
- October 28, 2024
- No Comment
- 13
ಮೈಸೂರು,ಅ28,Tv10 ಕನ್ನಡ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ ಪುನೀತ್ ರಾಜರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಲೆ ಮಹದೇಶ್ವರ ಸೇವಾ ಸಂಸ್ಥೆ ವತಿಯಿಂದ
ವಿಜಯನಗರದ ಖಾಸಗಿ ಹೋಟೆಲ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೂರನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಿಂದ ಡಾಕ್ಟರ್ ರೇಖಾ ಮನಃಶಾಂತಿ, ನಿರೂಪಣೆ ಕ್ಷೇತ್ರದಿಂದ ಮಂಜು ಸಿ ಶಂಕರ್, ಸಹಕಾರಿ ಕ್ಷೇತ್ರದಿಂದ ರಿಷಿ ವಿಶ್ವಕರ್ಮ, ಸಂಘಟನಾ ಕ್ಷೇತ್ರದಿಂದ ರೂಪ ಎಚ್ ಗೌಡ, ಕ್ರೀಡಾ ಕ್ಷೇತ್ರದಿಂದ ಅಲೋಕ್ ಆರ್ ಜೈನ್, ಚಿತ್ರರಂಗ ಕ್ಷೇತ್ರದಿಂದ ಸ್ಮಿತಾ ಬಿ, ಸಂಘಟನಾ ಕ್ಷೇತ್ರದಿಂದ
ಕಾಡನಹಳ್ಳಿ ಡಿ. ಸ್ವಾಮಿಗೌಡ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ ನಾರಾಯಣ ಗೌಡ,
ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೆ ಬಿ ಲಿಂಗರಾಜು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಮಾಜ ಸೇವಕರಾದ ನಜರಬಾದ್ ನಟರಾಜ್, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಮಲೆ ಮಾದೇಶ್ವರ ಸೇವಾ ಸಂಸ್ಥೆ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಶ್ರೇಯಸ್, ರಾಕೇಶ್, ಹಾಗೂ ಇನ್ನಿತರರು ಹಾಜರಿದ್ದರು…