ಮಂಗಳಮುಖಿಗೆ ಡಾಕ್ಟರೇಟ್…ಮೆರವಣಿಗೆ ಮೂಲಕ ಸಂಭ್ರಮ…
- TV10 Kannada Exclusive
- October 26, 2024
- No Comment
- 118
ಮೈಸೂರು,ಅ26,Tv10 ಕನ್ನಡ
ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಡಾಕ್ಟರೇಟ್ ಪಡೆದ ಮಂಗಳಮುಖಿಗೆ ಸಮುದಾಯದಿಂದ ಅಭಿನಂದನೆಗಳು ಹರಿದು ಬಂದಿದೆ.ಡಾಕ್ಟರೇಟ್ ಗೆ ಭಾಜನರಾದ ಮಂಗಳಮುಖಿಯನ್ನ ತಮ್ಮ ಸಮುದಾಯದವರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.ಮೆರವಣಿಗೆ ಮೂಲಕ ಕರೆದೊಯ್ದು ಸಂಭ್ರಮಿಸಿದ್ದಾರೆ.
ಗಾಯಿತ್ರಿಪುರಂ ನಿವಾಸಿ ಕರೀನಮ್ಮ@ ರುಬೀನ್ ತಾಜ್ ಡಾಕ್ಟರೇಟ್ ಪಡೆದ ಮಂಗಳಮುಖಿ.ಏಶಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯಲ್ಲಿ ಇಂದು ಕರೀನಮ್ಮ ಗೆ ಡಾಕ್ಟರೇಟ್ ಪದವಿಯನ್ನ ನೀಡಿ ಗೌರವಿಸಿದ್ದಾರೆ.ಸಮಾಜಸೇವೆಯಲ್ಲಿ ಸಾಧನೆ ಮಾಡಿದ ಹಿನ್ನಲೆ ಡಾಕ್ಟರೇಟ್ ಪದವಿ ನೀಡಲಾಗಿದೆ.ಬೆಂಗಳೂರಿನಿಂದ ಮೈಸೂರಿಗೆ ಬಂದ ಕರೀನಮ್ಮ ರವರನ್ನ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ಮಂಗಳಮುಖಿಯರು ಹರ್ಷ ವ್ಯಕ್ತಪಡಿಸಿದ್ದಾರೆ…