ಇಎಸ್ ಐ ವೈದ್ಯರ ಕ್ವಾರ್ಟರ್ಸ್ ನ ತಾರಸಿಯಲ್ಲಿ ನಿಂತ ಮಳೆ ನೀರು…ಸ್ಥಳೀಯರಿಗೆ ರೋಗರುಜಿನಗಳ ಭೀತಿ…ಪಾಲಿಕೆ ಅಧಿಕಾರಿಗಳೇ ಎಲ್ಲಿದ್ದೀರಿ…?
- TV10 Kannada Exclusive
- November 14, 2024
- No Comment
- 89
ಮೈಸೂರು,ನ14,Tv10 ಕನ್ನಡ
ಸಾರ್ವಜನಿಕರ ಆರೋಗ್ಯ ರಕ್ಷಿಸುವ ಹೊಣೆ ವೈದ್ಯರದ್ದು.ಆದ್ರೆ ವೈದ್ಯರು ವಾಸಿಸುವ ಕ್ವಾರ್ಟರ್ಸ್ ಗಳೇ ಸಾರ್ವಜನಿಕರಿಗೆ ರೋಗಹರಡುವ ತಾಣವಾದ್ರೆ ಹೇಗೆ…?ಹೌದು ಇಂತಹ ಪರಿಸ್ಥಿತಿ ಬಂದಿರೋದು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ವ್ಯಾಪ್ತಿ ವಾರ್ಡ್ ನಂಬರ್ 6 ಗೋಕುಲಂ 3 ನೇ ಹಂತದ 10 ಮುಖ್ಯರಸ್ತೆ ನಿವಾಸಿಗಳಿಗೆ. ಕೆ.ಆರ್.ಎಸ್.ಮುಖ್ಯ ರಸ್ತೆಯ ಇಎಸ್ ಐ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗಾಗಿ ಇಲ್ಲಿ ಕ್ವಾರ್ಟರ್ಸ್ ನಿರ್ಮಿಸಲಾಗಿದೆ.ಒಂದು ವರ್ಷದ ಹಿಂದೆ ನಿರ್ಮಿಸಿದ ಕಟ್ಟಡದ ತಾರಸಿಯಲ್ಲಿ ಮಳೆ ನೀರು ಈಜುಕೊಳದಂತೆ ನಿಂತಿದೆ.ಸರಾಗವಾಗಿ ಹರಿದುಹೋಗುವಂತೆ ಮಾಡುವಲ್ಲಿ ಕಂಟ್ರಾಕ್ಟರ್ ವಿಫಲವಾಗಿದ್ದಾನೆ.ಪರಿಣಾಮ ಮಳೆ ನೀರು ನಿಂತು ಕೊಳೆತುಹೋಗಿ ದುರ್ಗಂಧ ಬೀರುತ್ತಿದೆ.ಸೊಳ್ಳೆಗಳ ಆವಾಸಸ್ಥಾನವಾಗಿ ಪರಿಣಮಿಸಿದೆ.ಈಗಾಗಲೇ ಮಲೇರಿಯಾ, ಡೆಂಗ್ಯೂ ಭೀತಿ ಆವರಿಸಿರುವ ಸಮಯದಲ್ಲಿ ಸೊಳ್ಳೆಗಳ ಸಂತಾನಕ್ಕೆ ತಾರಸಿಯಲ್ಲಿ ನಿಂತ ಮಳೆ ನೀರು ಸಹಕಾರಿಯಾಗುತ್ತಿದೆ.ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದರೆ ಈ ಕ್ವಾರ್ಟರ್ಸ್ ನ ಸಮೀಪದಲ್ಲಿರುವ 10 ನೇ ಮುಖ್ಯ ರಸ್ತೆ ನಿವಾಸಿಗಳಿಗೆ ತಾರಸಿ ಮೇಲೆ ನಿಂತ ನೀರು ಪುಕ್ಕಟ್ಟೆಯಾಗಿ ರೋಗ ಹರಡುವ ಭೀತಿ ಸೃಷ್ಟಿಸಿದೆ.ನಿಂತು ಕೊಳೆತು ನಾರುತ್ತಿರುವ ಮಳೆ ನೀರನ್ನ ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಿ ಸ್ಥಳೀಯರ ಆರೋಗ್ಯ ರಕ್ಷಣೆಯತ್ತ ವಲಯ ಕಚೇರಿ 4 ರ ಅಧಿಕಾರಿಗಳು ಮುಂದಾಗಬೇಕಿದೆ…