ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಗೂಡ್ಸ್ ವಾಹನ…
- TV10 Kannada Exclusive
- November 15, 2024
- No Comment
- 37
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಗೂಡ್ಸ್ ವಾಹನ…
ಮಂಡ್ಯ,ನ15,Tv10 ಕನ್ನಡ
ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಫಿಲ್ಮಿ ಸ್ಟೈಲ್ ನಲ್ಲಿ ಮೇಲಕ್ಕೆಗರಿ ಪಲ್ಟಿಯಾದ ಘಟನೆ
ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಎಂ.ಕೆ.ಫ್ಯಾಕ್ಟರಿ ತಿರುವಿನಲ್ಲಿ ನಡೆದಿದೆ.
ಚಾಲಕನ ಅತಿ ವೇಗ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆಯಲ್ಲಿ ಗೂಡ್ಸ್ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.ಘಟನೆ ವೀಕ್ಷಿಸಿದ ಸ್ಥಳೀಯರೊಬ್ಬರು ಪ್ರತ್ಯಕ್ಷದರ್ಶಿಯೊಬ್ಬರು
ಅಪಘಾತದ ದೃಶ್ಯವನ್ನ ವರ್ಣಿಸಿದ್ದಾರೆ.
ಗಾಯಾಳು ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…