ಕುವೆಂಪುನಗರ ಪೊಲೀಸರ ಭರ್ಜರಿ ಬೇಟೆ…ಖತರ್ನಾಕ್ ಮನೆಗಳ್ಳನ ಬಂಧನ…36.22 ಲಕ್ಷ ಮೌಲ್ಯದ ಚಿನ್ನಾಭರಣ ವಶ…
- CrimeTV10 Kannada Exclusive
- November 15, 2024
- No Comment
- 588
ಮೈಸೂರು,ನ15,Tv10 ಕನ್ನಡ
ಖತರ್ನಾಕ್ ಮನೆಗಳ್ಳನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 36.12 ಲಕ್ಷ ಮೌಲ್ಯದ 516 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ಮೌಲ್ಯದ 28.70 ಗ್ರಾಂ ಬೆಳ್ಳಿ ಪದಾರ್ಥ ಒಟ್ಟು 36.22 ಲಕ್ಷ ಮೌಲ್ಯದ ಪದಾರ್ಥಗಳನ್ನ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಸಹ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ನಿವಾಸಿ ಪ್ರಸಾದ್ @ ಆಸಿಫ್ ಬಂಧಿತ ಆರೋಪಿ.ಮತ್ತೋರ್ವ ಆರೋಪಿ ಮಹಮದ್ ಮುನ್ನಾ ತಲೆ ಮರೆಸಿಕೊಂಡಿದ್ದಾನೆ.
ಶ್ರೀರಂಗಪಟ್ಟಣ ತಾಲೂಕು ನಗುವಿನಹಳ್ಳಿಯ ಮನೆಯೊಂದರಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು.
ಕುವೆಂಪುನಗರ ಪೊಲೀಸರು ತಪಾಸಣೆ ನಡೆಸುವ ವೇಳೆ ಶ್ರೀರಾಂಪುರ ಚೆಕ್ ಪೋಸ್ಟ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪ್ರಸಾದ್ ಸಿಬ್ಬಂದಿಗಳನ್ನ ಕಂಡು ಪರಾರಿಯಾಗಲು ಯತ್ನಿಸಿದ್ದ.ಈ ವೇಳೆ ಪ್ರಸಾದ್ ನನ್ನು ವಶಕ್ಕೆ ಪಡೆದು ಸ್ಕೂಟರ್ ನಲ್ಲಿ ಪರಿಶೀಲನೆ ಮಾಡಿದಾಗ ಕಳುವಾದ ಪದಾರ್ಥಗಳು ಪತ್ತೆಯಾಗಿದೆ.ಬಂಧಿತ ಆರೋಪಿ ಪ್ರಸಾದ್ ವಿರುದ್ದ ವಿವಿದೆಡೆಗಳಲ್ಲಿ ನಡೆದ 33 ಮನೆಗಳವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.ಮತ್ತಷ್ಟು ಕಳುವಾದ ಪದಾರ್ಥಗಳು ಪರಾರಿಯಾದ ಮತ್ತೋರ್ವ ಆರೋಪಿ ಮುನ್ನ ಬಳಿ ಇದ್ದು ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ.ಎಸ್. ಮಾರ್ಗದರ್ಶನದಲ್ಲಿ, ಕೆ.ಆರ್.ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಪಿಐ ಅರುಣ್ ಎಲ್,ಹಾಗೂ ಪಿಎಸ್ಸೈ ಗಳಾದ ಗೋಪಾಲ್,ಮದನ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆನಂದ್,ಮಹೇಶ್ವರ್,ಮಂಜುನಾಥ್ ಕೆಟಿ,ಮಂಜುನಾಥ್ ಎಂಪಿ,ಯಶವಂತ್,ಮಂಜು,ಹಜರತ್,ಸುರೇಶ್,ರವಿ,ನಾಗೇಶ್ ಹಾಗೂ ಕುಮಾರ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.
ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಶ್ಲಾಘಿಸಿದ್ದಾರೆ…