ರಸ್ತೆ ಬದಿ ವ್ಯಾಪಾರಸ್ಥರಿಂದ ಕಿರಿಕಿರಿ ತಪ್ಪಿಸಿ…ದಸರಾ ವಸ್ತುಪ್ರದರ್ಶನ ಅಧ್ಯಕ್ಷರಿಗೆ ಗ್ರಾಹಕ ಪಂಚಾಯತ್ ನಿಂದ ಮನವಿ…
- TV10 Kannada Exclusive
- November 19, 2024
- No Comment
- 55
ಮೈಸೂರು,ನ19,Tv10 ಕನ್ನಡ
ದಸರಾ ವಸ್ತುಪ್ರದರ್ಶನದಲ್ಲಿ ಅನಧಿಕೃತ ರಸ್ತೆಬದಿ ವ್ಯಾಪಾರಸ್ಥರಿಂದ ಪ್ರವಾಸಿಗರಿಗೆ ಹಾಗೂ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಕಿರುಕುಳ, ತಪ್ಪಿಸಬೇಕೆಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ರವರಿಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಇಂದು ಮನವಿ ನೀಡಲಾಯಿತು.
ದಸರಾ ವಸ್ತುಪ್ರದರ್ಶನಕ್ಕೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ, ಮಳಿಗೆಗಳ ವ್ಯಾಪಾರಸ್ಥರು ಕೂಡ ಲಕ್ಷಾಂತರ ಹಣ ವ್ಯಯಿಸಿ 3 ತಿಂಗಳು ವ್ಯಾಪಾರಕ್ಕೆಂದು ಶ್ರಮ ವಹಿಸುತ್ತಾರೆ, ಆದರೆ ಕರ್ನಾಟಕ ವಸ್ತುಪ್ರದರ್ಶನದ ಕಾರ್ಯನಿರ್ವಾಹಣಾಧಿಕಾರಿ ಮತ್ತು ಅಧಿಕಾರಿಗಳು ಕೇವಲ ಎಸಿ ರೂಮಿನಲ್ಲಿ ಕೂತು ಕೆಲಸಕ್ಕೆ ಸೀಮಿತವಾಗಿದ್ದಾರೆ ಹೊರೆತು ಪ್ರತಿನಿತ್ಯ ಪ್ರವಾಸಿಗರಿಗೆ ಸಾರ್ವಜನಿಕರಿಗೆ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆರೋಪಿಸಿದೆ.ಎ ಬ್ಲಾಕ್, ಚಾಮುಂಡಿ ಬ್ಲಾಕ್ ಮುಖ್ಯದ್ವಾರದ ಮುಂಭಾಗ ಸೇರಿದಂತೆ ವಸ್ತುಪ್ರದರ್ಶನದ ಬಹುತೇಖ ರಸ್ತೆಗಳಲ್ಲಿ ಅನಧಿಕೃತವಾಗಿ ರಸ್ತೆಬದಿ ವ್ಯಾಪಾರಸ್ಥರು ಗ್ರಾಹಕರನ್ನ ಸುತ್ತುವರೆದು ನಡೆದುಕೊಂಡು ಹೋಗಲು ದಾರಿ ಬಿಡುತ್ತಿಲ್ಲ.ಗ್ರಾಹಕರ ಮೇಲೆ ದಬ್ಬಾಳಿಕೆಯೂ ಹೆಚ್ಚಾಗಿದೆ.ಇದರ ಮಧ್ಯೆ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಜಾಗವಿಲ್ಲದ ಕಾರಣ ಜನಗುಂಪಿನಲ್ಲಿ ಕಳ್ಳರ ಹಾವಳಿಯೂ ಇದೆ.ಈ ಬೆಳವಣಿಗೆ ಮೈಸೂರು ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ, ಅನುಮತಿಯಿಲ್ಲದ ಅನಧಿಕೃತ ವ್ಯಾಪಾರಸ್ಥರ ವರ್ತನೆ ಮಹಿಳೆಯರಿಗೆ ಹಿರಿಯ ನಾಗರೀಕರಿಗೆ ಮುಜುಗರ ತರುತ್ತಿದೆ. ರಸ್ತೆಬದಿ ವ್ಯಾಪಾರಕ್ಕೆ ಪ್ರಾಧಿಕಾರ ಅನುಮತಿ ನೀಡಿದೆಯೇ?! ಇದರಿಂದ ಪ್ರಾಧಿಕಾರಕ್ಕೆ ಎಷ್ಟು ಆದಾಯ ಬಂದಿದೆ?! ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಅಧಿಕಾರಿಗಳು ಸುಮ್ಮನಿರಲು ಕಾರಣವೇನು?! ಅಥವಾ ಖಾಸಗಿ ಟೆಂಡರ್ ರವರ ಗೂಂಡಾ ಮಾಫಿಯಾ ಅಕ್ರಮ ವ್ಯಕ್ತಿಗಳು ವಸೂಲಿಗೆ ನಿಂತಿದ್ದಾರೆಯೇ? ಪ್ರಾಧಿಕಾರ ಪ್ರವಾಸಿಗರ ಪರ ನಿಲ್ಲದಿರಲು ಕುರುಡು ಕಾಂಚಾಣ ಕಾರಣವೇ ?ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಮೂಡುತ್ತಿದೆ, ಕಾನೂನಿನ ಮುಂದೆ ಯಾರು ದೊಡ್ಡವರಲ್ಲಾ ಸುತ್ತಲು ಸಿಸಿ ಕ್ಯಾಮೆರಾ ಇದ್ದು ಅನಧಿಕೃತ ರಸ್ತೆ ಬದಿ ವ್ಯಾಪರಸ್ಥರಿಂದ ಪ್ರವಾಸಿಗರಿಗೆ ಆಗುತ್ತಿರುವ ಶೋಷಣೆ ತಡೆಹಿಡಿಯಲು ಗಸ್ತಿನ ಪೋಲಿಸರು, ಭದ್ರತಾ ಸಿಬ್ಬಂದಿಗಳು ಮುಂದಾಗುವಂತೆ ಸೂಚಿಸುವಂತೆ ಮನವಿ ಮಾಡಿದ್ದಾರೆ. ಈಕೂಡಲೇ ಕ್ರಮಕೈಗೊಂಡು ಸಾರ್ವಜನಿಕರಿಗೆ ಪ್ರವಾಸಿಗರಿಗೆ ಸುಗಮಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ರವರು ಅಧ್ಯಕ್ಷ ಅಯೂಬ್ ಖಾನ್ ಗೆ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್, ಮಹಿಳಾ ಪ್ರಮುಖ್ ನಾಗಮಣಿ, ಚಕ್ರಪಾಣಿ, ದಯಾನಂದ್, ಹಾಗೂ ಇನ್ನಿತರರು ಹಾಜರಿದ್ದರು…