ಹುಣಸೂರು ಟೌನ್ ಪೊಲೀಸರ ಕಾರ್ಯಾಚರಣೆ…ಮನೆಗಳವು ಆರೋಪಿ ಬಂಧನ…18 ಕಳವು ಪ್ರಕರಣ ಪತ್ತೆ…ನಗದು ಸೇರಿದಂತೆ 5.5 ಲಕ್ಷ ಮೌಲ್ಯದ ಪದಾರ್ಥಗಳು ವಶ…
- CrimeTV10 Kannada Exclusive
- November 20, 2024
- No Comment
- 34
ಹುಣಸೂರು,ನ20,Tv10 ಕನ್ನಡ
ಹುಣಸೂರು ಟೌನ್ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮನೆಗಳವು ಆರೋಪಿ ಬಂಧನವಾಗಿದೆ.ಬಂಧಿತನಿಂದ 1.72 ಲಕ್ಷ ನಗದು ಸೇರಿದಂತೆ 5.5 ಲಕ್ಷ ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.ಮೈಸೂರಿನ ಬೆಲವತ್ತ ಗ್ರಾಮದ ಸೈಯದ್ ಉಸ್ಮಾನ್(35) ಬಂಧಿತ ಆರೋಪಿ.ಹುಣಸೂರಿನ ಬಜಾರ್ ರಸ್ತೆ,ಜೆ.ಎಲ್.ಬಿ.ರಸ್ತೆ,ಹಳೇ ಸೇತುವೆ ರಸ್ತೆಯ ಮೆಡಿಕಲ್ ಶಾಪ್ ಗಳಲ್ಲಿ ಕನ್ನ ಕಳುವು ಪ್ರಕರಣಗಳು ನಡೆದಿತ್ತು.ಈ ಸಂಭಂಧ ಖದೀಮನ ಬಂಧನಕ್ಕೆ ಹುಣಸೂರು ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಜಾಲ ಬೀಸಿದ್ದರು.ಖತರ್ನಾಕ್ ಕಳ್ಳ ಪೊಲೀಸರು ಹಣೆದ ಜಾಲಕ್ಕೆ ಸಿಕ್ಕಿಬಿದ್ದಿದ್ದಾನೆ.ಹುಣಸೂರು,ಮೈಸೂರು,ಬೆಂಗಳೂರು,ರಾಮನಗರ,ಮಂಡ್ಯ,ನಂಜನಗೂಡು ಸೇರಿದಂತೆ ಇತರೆಡೆ ನಡೆದ 18 ಕನ್ನಕಳುವು ಪ್ರಕರಣಗಳು ಪತ್ತೆಯಾಗಿದೆ.ಬಂಧಿತನಿಂದ 1.72 ಲಕ್ಷ ನಗದು,10 ಗ್ರಾಂ ಚಿನ್ನಾಭರಣ,3 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಉಸ್ತುವಾರಿಯಲ್ಲಿ ಹುಣಸೂರು ಟೌನ್ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಸಂತೋಷ್ ಕಶ್ಯಪ್,ಪಿಎಸ್ಸೈ ಗಳಾದ ನಾಗಯ್ಯ ಹಾಗೂ ಜಮೀರ್ ಅಹ್ಮದ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಯೋಗೇಶ್,ಅರುಣ್,ರವೀಶ್,ಮಹೇಂದ್ತ,ದಿಲೀಪ್,ರವಿಕುಮಾರ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…