ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21 ಕುಟುಂಬ ಹೈರಾಣು…
- TV10 Kannada Exclusive
- November 20, 2024
- No Comment
- 8
ನಂಜನಗೂಡು,ನ20,Tv10 ಕನ್ನಡ
ಕಾಡುತೊರೆದು ನಾಡಿಗೆ ಬಂದು ನೆಲೆಸಿದರೂ ಮೂಲ ಆದಿವಾಸಿ ಜನರಿಗೆ ಬವಣೆ ತಪ್ಪಿಲ್ಲ.ಸರ್ಕಾರಿ ಸೌಲಭ್ಯಗಳಿಂದ ವಂಚಿತಾರದ ಸುಮಾರು 21 ಕುಟುಂಬ
ಹೈರಾಣರಾಗಿದ್ದಾರೆ.ಪರಿಶಿಷ್ಟ ಪಂಗಡ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.ನಂಜನಗೂಡು ತಾಲೂಕಿನ ಹುರ ಹಾಗೂ ಕಪ್ಪುಸೋಗೆ ಗ್ರಾಮದಲ್ಲಿ ಸುಮಾರು 21 ಕಾಡುಕುರುಬ ಸೋಲಿಗ ಜನಾಂಗದ ಕುಟುಂಬಗಳು ನೆಲೆಸಿವೆ.ಕೆಲವು ದಶಕಗಳ ಹಿಂದೆ ಸರ್ಕಾರ ನೀಡಿದ ಕರೆ ಮೇಲೆ ಕಾಡುತೊರೆದ ಈ ಕುಟುಂಬಗಳು ನಾಡು ಸೇರಿವೆ.ವರುಷಗಳೇ ಉರುಳಿದರೂ ಈ ಕುಟುಂಬಗಳು ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿವೆ.
ಪೌಷ್ಟಿಕ ಆಹಾರ ಪದಾರ್ಥಗಳು ಇವರಿಗೆ ಮರೀಚಿಕೆಯಾಗಿವೆ
ವಾಸಿಸಲು ಮನೆ, ಸರ್ಕಾರದಿಂದ ಸಾಕಷ್ಟು ವರ್ಷಗಳಿಂದ ವಿತರಿಸಲಾಗುತ್ತಿರುವ ಪೌಷ್ಠಿಕ ಆಹಾರ ಪದಾರ್ಥ,ವಾಸದ ಗುಡಿಸಲು ಗಳಿಗೆ ವಿದ್ಯುತ್ ಸಂಪರ್ಕ ಬಂದಿಲ್ಲ.ಮೂರು ತಲೆಮಾರುಗಳ ಹಿಂದೆ ಕಾಡು ತೊರೆದು ನಾಡಿಗೆ ಬಂದು ನೆಲೆಸಿದರೂ ಇದುವರೆಗೂ ಪರಿಶಿಷ್ಟ ಪಂಗಡ ಅಧಿಕಾರಿಗಳು ಇವರ ಕುಟುಂಬದ ಬಳಿ ಭೇಟಿ ನೀಡಿ ಪರಿಶೀಲಿಸಿಲ್ಲ.ಸಂಕಷ್ಟದ ಪರಿಸ್ಥಿತಿಯಲ್ಲಿ ಹೀನಾಯ ಬದುಕು ಸಾಗಿಸುತ್ತಿರುವ ಈ ಕುಟುಂಬಗಳ ಬವಣೆ ತಪ್ಪುವುದು ಯಾವಾಗ..?