ಮಹಿಳೆ ಕೊಂದ ಸ್ಥಳದಲ್ಲೇ ಹಸು ಬಲಿ ಪಡೆದ ಹುಲಿ…ಅರಣ್ಯಾಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಷ…

ಮಹಿಳೆ ಕೊಂದ ಸ್ಥಳದಲ್ಲೇ ಹಸು ಬಲಿ ಪಡೆದ ಹುಲಿ…ಅರಣ್ಯಾಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಷ…

ನಂಜನಗೂಡು,ನ20,Tv10 ಕನ್ನಡ

ಕಳೆದ ವರ್ಷ ಮಹಿಳೆಯನ್ನ ಕೊಂದಿದ್ದ ಸ್ಥಳದಲ್ಲೇ ಹುಲಿರಾಯ ಹಸುವೊಂದನ್ನ ಬಲಿ ಪಡೆದಿದ್ದಾನೆ.ಹುಲಿ ಕಾಟದಿಂದ ಮುಕ್ತಿ ಸಿಗದ ಹಿನ್ನಲೆ ಸ್ಥಳೀಯರು ಅರಣ್ಯಾಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ನಿಮ್ಮಿಂದ ಕಾಡಿಗಟ್ಟಲು ಸಾಧ್ಯವಿಲ್ಲವೆಂದ್ರೆ ನಾವೇ ಅಟ್ಟುತ್ತೇವೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಘಟನೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯ ವ್ಯಾಪ್ತಿಯ ನಾಗಣಾಪುರದಲ್ಲಿ
ಪದೇ ಪದೇ ಹುಲಿ ಕಾಣಿಸಿಕೊಳ್ಳುತ್ತಿದೆ.
ಕಳೆದ ವರ್ಷ ಇದೆ ಸ್ಥಳದಲ್ಲಿ ಹುಲಿ ಮಹಿಳೆಯನ್ನು ಕೊಂದಿತ್ತು.
ಇದೀಗಾ ಹಸುವನ್ನ ಬಲಿ ಪಡೆದು ಮತ್ತೆ ಆತಂಕ ಸೃಷ್ಟಿ ಮಾಡಿದೆ.
ಹುಲಿ ಸೆರೆ ಹಿಡಿಯುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ
ಅರಣ್ಯಾಧಿಕಾರಿಯನ್ನ ತರಾಟೆ ತೆಗೆದುಕೊಂಡ ಯುವಕರು ನಿಮ್ಮಿಂದ ಹುಲಿಯನ್ನ ಕಾಡಿಗಟ್ಟಲು ಸಾಧ್ಯವಿಲ್ಲ ಅಂದ್ರೆ ನಾವೇ ಓಡಿಸುತ್ತೇವೆ ಎಂದು ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಲಿ ದಾಳಿಯಿಂದ ಯಾರಾದರು ಸತ್ತ ಮೇಲೆ‌ ಬಂದು ನೀವು ಬಂದು ಮೌನಾಚರಣೆ ಮಾಡೋದು ಬೇಡ.
ನಾಳೆ ನೀವು ಬಂದು ಪರಿಹಾರ ಕೊಡುವುದು ಬೇಡ.
ನೀವು ಹುಲಿ ಬಗ್ಗೆ ಓದಿಕೊಂಡಿದ್ದೀರಾ ನಾವು ಅನುಭವಿಸುತ್ತಿದ್ದೇವೆ.
ನಿಮ್ಮ ಕೈಯಲ್ಲಿ ಶಾಶ್ವತ ಪರಿಹಾರ ಕೊಡಲು ಸಾಧ್ಯವಿಲ್ಲ.ಕಳೆದ ವರ್ಷ ಹುಲಿ ದಾಳಿಯಾಗಿ ಮಹಿಳೆ ಸಾವನಪ್ಪಿದ್ರು.
ಈಗ ಮತ್ತೆ ಜಾನುವಾರು ಮೇಲೆ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *