
ಮೀನಿನ ಗಾಳಕ್ಕೆ ಮಹಿಳೆ ಮೃತದೇಹ ಸಿಲುಕಿದ ಪ್ರಕರಣ…ಪತಿ ಅಂದರ್…ನಿಗೂಢ ಕೊಲೆ ರಹಸ್ಯ ಬಯಲು…ಕೆ.ಆರ್.ಎಸ್.ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…
- CrimeTV10 Kannada Exclusive
- November 23, 2024
- No Comment
- 151
ಮಂಡ್ಯ,ನ23,Tv10 ಕನ್ನಡ
ಶ್ರೀರಂಗಪಟ್ಟಣ ತಾಲೂಕು ಮೊಗರಹಳ್ಳಿ ಗ್ರಾಮದ ಬಳಿಯ ವರುಣಾ ಕಾಲುವೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಸಿಕ್ಕಿದ್ದ ಅಪರಿಚಿತ ಮಹಿಳೆ ಶವ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.ನಿಗೂಢ ಕೊಲೆ ರಹಸ್ಯ ಭೇಧಿಸುವಲ್ಲಿ ಕೆ.ಆರ್.ಎಸ್.ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಭಂಧಿಸಿದಂತೆ ಮೃತಳ ಪತಿಯನ್ನ ಅರೆಸ್ಟ್ ಮಾಡಿದ್ದಾರೆ.ಹಣಕಾಸು ವಿಚಾರದಲ್ಲಿ ಪತ್ನಿಯನ್ನ ನಾಲೆಗೆ ತಳ್ಳಿ ಕೊಂದು ಸುಳಿವು ನೀಡದಂತೆ ಅಮಾಯಕನಂತೆ ಸೋಗುಹಾಕಿದ್ದ ಪತಿರಾಯ ಸಿಕ್ಕಿಬಿದ್ದಿದ್ದಾನೆ.
ಹಾಸನ ನ ಕೃಷ್ಣನಗರದ ನಿವಾಸಿ ಪ್ರಮೀಳಾ ಎ.ಪಿ (39) ಪತಿಯಿಂದ ಕೊಲೆಯಾದ ದುರ್ದೈವಿ.ಆಕೆಯ ಎರಡನೇ ಪತಿ ಅಲೂರು ತಾಲ್ಲೋಕು ಯಡವನಹಳ್ಳಿ ನಿವಾಸಿ ನಿವಾಸಿ ಕಿರಣ್ .ವೈ.ಎನ್ (32) ಕೊಲೆ ಮಾಡಿದ ಹಂತಕ.ಐದು ವರ್ಷಗಳ ಹಿಂದೆ ಪತಿ ಸಾವನಪ್ಪಿದ ನಂತರ ಹಾಸನದಲ್ಲಿ ವಾಸವಿದ್ದ ಎರಡು ಮಕ್ಕಳ ತಾಯಿ ಆಗಿದ್ದ ಪ್ರಮೀಳಾ ಗೆ ಮನೆಯ ಸಮೀಪದಲ್ಲಿ ವಾಸವಾಗಿದ್ದ ಕಿರಣ್ ಪರಿಚಯವಾಗಿ ಪ್ರೇಮಕ್ಕೆ ತಿರುಗಿ ಮದುವೆ ಆಗಿದ್ದಾರೆ. ಮೈಸೂರಿನ ಆರ್.ಬಿ.ಐ ನಲ್ಲಿ ಅರೆಕಾಲಿಕ ಹುದ್ದೆ ಸಿಕ್ಕಿದ ನಂತರ ಅಲ್ಲಿಯೆ ಪ್ರಮೀಳಾಳನ್ನ ಕೆಲಸ ಕೊಡಿಸಿ ಮೈಸೂರಿಗೆ ಕರೆತಂದಿದ್ದಾನೆ.ಮೂರು ವರ್ಷಗಳ ಹಿಂದೆ ಪ್ರಮಿಳಾಗೆ ತಿಳಸದೆ ಕಿರಣ್ ಮನೆಯ ಪೋಷಕರ ಒತ್ತಾಯಕ್ಕೆ ಮಣಿದು ತನ್ನದೆ ಸಮುದಾಯದ ಯುವತಿಯನ್ನು ಮದುವೆಯಾಗಿದ್ದಾನೆ. ಈಕೆಗೆ ತನ್ನ ಮೊದಲ ಪತ್ನಿ ಬಗ್ಗೆ 6 ತಿಂಗಳ ನಂತರ ತಿಳಿಸಿದ್ದಾನೆ.
ಕೆಲಸ ಗಿಟ್ಟಿಸಲು ಇಬ್ಬರು ಸೇರಿ ಒರ್ವ ವ್ಯಕ್ತಿಗೆ ಸುಮಾರು ಐದಾರು ಲಕ್ಷ ಹಣ ನೀಡಿದ್ದರು.ಆತ ಮೋಸ ಮಾಡಿದ್ದ. ನಂತರ ಹಲವು ತಿಂಗಳ ಹಿಂದೆ ಪ್ರಮೀಳಾ ಹಾಗು ಕಿರಣ್ ಇಬ್ಬರು ರಿಂಗ್ ರಸ್ತೆ ಸಮೀಪದಲ್ಲಿ ಗೌಡಾಸ್ ಮಿಲ್ಟ್ರಿ ಹೋಟೆಲ್ ಪ್ರಾರಂಭಿಸಿದ್ದರು.ಇದಕ್ಕೆ ಪ್ರಮೀಳಾ ಸುಮಾರು 3 ಲಕ್ಷ ಹಣ ನೀಡಿದ್ದಳೆಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮ ನಷ್ಟವಾಗಿ ಮುಚ್ಚಿದ್ದಾರೆ. ಇಬ್ಬರ ನಡುವ ಮನಸ್ತಾಪ ಉಂಟಾಗಿದೆ. ಈ ಸಂದರ್ಭದಲ್ಲಿ ಕಿರಣ್ ಮಾಡಿಕೊಂಡಿದ್ದ ಎರಡನೇ ಮದುವೆ ವಿಚಾರದಲ್ಲಿ ಪ್ರತಿದಿನ ಜಗಳವಾಗಿದೆ.ಎರಡನೇ ಪತ್ನಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಪ್ರಮಿಳಾ ಹೋಗಿ ಜಗಳ ಮಾಡಿ ಹಲ್ಲೆ ಮಾಡಿದ್ದಳೆಂದು ಹೇಳಲಾಗಿದೆ.
ಇದರಿಂದ ಕಿರಣ್ ಬೇಸತ್ತಿದ್ದ.ಈ ಮಧ್ಯೆ ಪ್ರಮೀಳಾ ತನ್ನ ಲಕ್ಷಾಂತರ ಹಣ ವಾಪಸ್ಸು ನೀಡುವಂತೆ ಪೀಡಿಸ ತೊಡಗಿದ್ದಾಳೆ. ಕಿರಣ್ ಎರನೇ ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದ ಆಕೆ ಅಸ್ಪತ್ರೆಗೆ ಪರೀಕ್ಷೆ ಮಾಡಲು ಕರೆದುಕೊಂಡು ಹೋಗಿದ್ದನ್ನು ನೆಪ ಮಾಡಿ ಮತ್ತ ಜಗಳವಾಗಿದೆ.
ಇದರಿಂದ ಬೇಸತ್ತ ಕಿರಣ್ ನವೆಂಬರ್ 17 ರಂದು ಮಧ್ಯಾಹ್ನ ಪ್ರಮೀಳಾ ನ ಆಕೆ ಮಗಳ ವರ್ಷಿತಾ ಹುಟ್ಟು ಹಬ್ಬಕ್ಕೆಂದು ಮೀನು ತರಲು ಕರೆದುಕೊಂಡು ಬಂದು ಮೊಗರಹಳ್ಳಿ ಸಮೀಪ ವರುಣಾ ನಾಲೆಯಲ್ಲಿ ಮೀನು ತಿನ್ನಿಸಿ ತುಂಬಿ ಹರಿಯುತ್ತಿದ್ದ ನಾಲೆಗೆ ತಳ್ಳಿ ಕೊಲೆ ಮಾಡಿ ನಂತರ ಮನೆಗೆ ತೆರಳಿದ್ದಾನೆ. ಪ್ರಮೀಳಾ ಕೆಲಸ ನಿಮಿತ್ತ ಸ್ನೇಹಿತರ ಮನೆಗೆ ಹೋದಳೆಂದು ತಿಳಿಸಿದ್ದಾನೆ.ನಂತರ ಪ್ರಮೀಳಾ ಪೋಷಕರು ಮಗಳಿಗೆ ಕರೆ ಮಾಡಿದ್ದಾರೆ. 2 ದಿನ ಕಳೆದರು ಪೋನ್ ರೀಸಿವ್ ಮಾಡದೆ ಹೋದಾಗ ಅನುಮಾನಗೊಂಡು ಪಕ್ಕದ ಮನೆಗೆ ಕರೆ ಮಾಡಿ ಮಕ್ಕಳ ಜೊತೆ ಮಾತನಾಡಿದಾಗ ಎರಡು ದಿನಗಳಿಂದ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಅನುಮಾನಗೊಂಡ ಪ್ರಮೀಳಾ ಸಹೋದರ ಹಾಗೂ ತಾಯಿ ಮೈಸೂರಿಗೆ ಬಂದು ಕಿರಣ್ ಗೆ ವಿಚಾರಿಸಿದಾಗ ಹಾರಿಕೆ ಉತ್ತರ ನೀಡಿದ್ದಾನೆ. ಅನುಮಾನಗೊಂಡು ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರು ಪ್ರಮೀಳಾ ಚಹರೆ ವುಳ್ಳ ಶವ ಕೆ.ಆರ್.ಸಾಗರ ಪೊಲೀಸ ಠಾಣೆಯಲ್ಲಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ.ಪ್ರಮೀಳಾ ಸಹೋದರ ಕೆ.ಆರ್.ಸಾಗರ ಪೊಲೀಸ್ ಠಾಣೆ ಬಂದು ಚಹರೆ ಗುರುತಿಸಿ ಶವ ತನ್ನ ಅಕ್ಕನದು ಎಂದು ತಿಳಿಸಿ ಈಕೆ ಮೃತ ಪಟ್ಟಿರುವುದರ ಬಗ್ಗೆ ಕಿರಣ್ ಮೇಲೆ ಅನುಮಾನ ಇದೇ ಎಂದು ತಿಳಿಸಿದ್ದಾನೆ. ಪ್ರಮೀಳಾ ಮಕ್ಕಳ ಬಳಿ ಸಹ ಪ್ರಮೀಳಾ ಕಾಲು ಜಾರಿ ನಾಲೆಗೆ ಬಿದ್ದಿದ್ದು ಶವ ಸಿಕ್ಕಿಲ್ಲ ಈ ವಿಷಯ ಯಾರಿಗೂ ತಿಳಿಸ ಬೇಡಿ ಎಂದು ಹೇಳಿದ್ದಾನೆಂದು ಮಕ್ಕಳು ಪೊಲೀಸರಿಗರ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಸಿ.ಪಿ.ಐ ಪುನೀತ್ ತಕ್ಷಣ ತನಿಖೆ ಕೈಗೊಂಡು ಕಿರಣ್ ನನ್ನು ಶುಕ್ರವಾರ ಹಾಸನ ನಗರದ ಬೇಕರಿ ಬಳಿ ಇದ್ದಾಗ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ತನ್ನ ಹಾಗೂ ಪ್ರಮೀಳಾ ನಡುವೆ ಜಗಳವಾಗಿ ಬೆಸರಗೊಂಡು ತಾನೇ ವರುಣಾ ನಾಲೆಗೆ ತಳ್ಳಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.
ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಡಿ.ವೈ.ಎಸ್ಪಿ ಮರಳಿ ಮಾರ್ಗದರ್ಶನಲ್ಲಿ, ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕ ಪುನೀತ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಕೆ.ಆರ್.ಸಾಗರ ಪೊಲಿಸ್ ಠಾಣಾ ಪಿ.ಎಸೈ ರಮೇಶ್ ಕರ್ಕಿಕಟ್ಟೆ, ಕ್ರೈಂ ಪಿ.ಎಸೈ ರಾಮಣ್ಣ, ಎ.ಎಸೈ ನಟರಾಜು, ಹೆಚ್.ಸಿ ಸತೀಶ್, ಪುರುಷೋತ್ತಮ ಕ್ರೈಂ ಸಿಬ್ಬಂದಿಗಳಾದ ಶ್ರೀಧರ್, ರವೀಶ್, ಪ್ರಭುಸ್ವಾಮಿ ರವರು ಆರೋಪಿ ಬಂಧನ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ…