
ಹೋಟೆಲ್ ಬಿಲ್ ಪಾವತಿಸದ ಆರೋಪ…10 ದಿನಗಳ ನಂತರ ಮಹಿಳೆ ಮೇಲೆ ಹಲ್ಲೆ…ಮಾಲೀಕರು ಸೇರಿದಂತೆ ಮೂವರ ವಿರುದ್ದ FIR ದಾಖಲು…
- Uncategorized
- November 25, 2024
- No Comment
- 422
ಮೈಸೂರು,ನ25,Tv10 ಕನ್ನಡ
ಹೋಟೆಲ್ ಬಿಲ್ ಪಾವತಿ ಮಾಡಿಲ್ಲವೆಂದು ಆರೋಪಿಸಿ ಮಾಲೀಕರು ಸೇರಿದಂತೆ ಮೂವರು ವ್ಯಕ್ತಿಗಳು ಮಹಿಳೆಯೋರ್ವರನ್ನ ನಡುರಸ್ತೆಯಲ್ಲಿ ಹಿಡಿದು ಹಲ್ಲೆ ನಡೆಸಿದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚವಟಿ ಸರ್ಕಲ್ ಬಳಿ ನಡೆದಿದೆ.ಮೈಸೂರು ಕಿಚನ್ ಹೋಟೆಲ್ ಮಾಲೀಕರಾದ ಸವಿತಾ ಸೇರಿದಂತೆ ಮೂವರ ವಿರುದ್ದ ಜಯಲಕ್ಷ್ಮಿಪಿರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಹಲ್ಲೆಗೊಳಗಾದ ಶೋಭಾ(40) ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಹೂವು ಮಾರಾಟ ಮಾಡುವ ಶೋಭಾ ರವರು 12-11-24 ರಂದು ಮೈಸೂರು ಕಿಚನ್ ಹೋಟೆಲ್ ನಲ್ಲಿ ಖಾರಾಬಾತ್ ಹಾಗೂ ರೈಸ್ ಭಾತ್ ಖರೀದಿಸಿದ್ದಾರೆ.170/- ರೂ ಬಿಲ್ ಪಾವತಿಸಿದ್ದಾರೆ.ಹೀಗಿದ್ದೂ 10 ದಿನಗಳ ನಂತರ ಮಾಲೀಕರಾದ ಸವಿತಾ ಇಬ್ಬರು ವ್ಯಕ್ತಿಗಳನ್ನ ಕಾರಿನಲ್ಲಿ ಕರೆತಂದು ಪಂಚವಟಿ ಸರ್ಕಲ್ ಬಳಿ ಹೋಗುತ್ತಿದ್ದ ಶೋಭಾ ರವರನ್ನ ಅಡ್ಡಗಟ್ಟಿ ಬಿಲ್ ಪಾವತಿಸಿಲ್ಲವೆಂದು ಆರೋಪಿಸಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಾರೆ.ಹಲ್ಲೆಯಿಂದ ಶೋಭಾ ರವರ ಕಿವಿ ತಮಟೆ ಹೊಡೆದುಹೋಗಿದೆ ಎಂದು ಆರೋಪಿಸಿರುವ ಶೋಭಾ ಸವಿತಾ ಹಾಗೂ ಇಬ್ಬರು ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ FIR ದಾಖಲಿಸಿದ್ದಾರೆ…