ಫೆಂಗಲ್ ಎಫೆಕ್ಟ್…ಜಿಲ್ಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ…ಹುಣಸೂರಿನಲ್ಲಿ ಇಲ್ಲ ಪಾಲನೆ…ಡಿಸಿ ಆದೇಶಕ್ಕೆ ಕ್ಯಾರೆ ಎನ್ನದ ಬಿಇಓ…
- TV10 Kannada Exclusive
- December 2, 2024
- No Comment
- 169
ಹುಣಸೂರು,ಡಿ2,Tv10 ಕನ್ನಡ
ಫೆಂಗಲ್ ಚಂಡಮಾರುತದ ಎಫೆಕ್ಟ್ ರಾಜ್ಯದ ಮೇಲೂ ಪರಿಣಾಮ ಬೀರಿದೆ.ರಾಜ್ಯದಲ್ಲೆಲ್ಲಾ ಜಿಟಿ ಜಿಟಿ ಮಳೆ ಆರಂಭವಾಗಿದೆ.ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.ಮೈಸೂರು ಜಿಲ್ಲೆಯಲ್ಲೂ ಸಹ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.ಆದ್ರೆ ಜಿಲ್ಲಾಧಿಕಾರಿಗಳ ಆದೇಶ ಹುಣಸೂರು ತಾಲೂಕಿನ ಮೇಲೆ ಪರಿಣಾಮ ಬೀರುವಂತೆ ಕಾಣುತ್ತಿಲ್ಲ.ಹುಣಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಳೆ ಬಂದಲ್ಲಿ ರಜೆ ಆದೇಶ ಪಾಲಿಸುವಂತೆ ಶಾಲೆಗಳಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶಕ್ಕೂ ಕ್ಷೇತ್ರ ಶಿಕ್ಣಣಾಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ.ಒಟ್ಟಾರೆ ಹುಣಸೂರು ತಾಲೂಕಿನ ಶಾಲೆಗಳ ಮುಖ್ಯಸ್ಥರಿಗೆ ಯಾರ ಆದೇಶ ಪಾಲಿಸುವುದೋ ತಿಳಿಯದೆ ಗೊಂದಲಕ್ಕೆ ಸಿಲುಕಿದ್ದಾರೆ…