ಹಾಡಿ ನಿವಾಸಿಗಳಿಗೆ ಹೊದಿಕೆ ವಿತರಣೆ…ಆರೋಗ್ಯದ ಬಗ್ಗೆ ಜಾಗೃತಿ..ಕೆ ಎಂ ಪಿ ಕೆ ಟ್ರಸ್ಟ್ ನಿಂದ ಸಾಮಾಜಿಕ ಕಳಕಳಿ…

ಹಾಡಿ ನಿವಾಸಿಗಳಿಗೆ ಹೊದಿಕೆ ವಿತರಣೆ…ಆರೋಗ್ಯದ ಬಗ್ಗೆ ಜಾಗೃತಿ..ಕೆ ಎಂ ಪಿ ಕೆ ಟ್ರಸ್ಟ್ ನಿಂದ ಸಾಮಾಜಿಕ ಕಳಕಳಿ…

ಹೆಚ್.ಡಿ.ಕೋಟೆ,ಡ2,Tv10 ಕನ್ನಡ

ಛಳಿಗಾಲ ಆತಂಭವಾಗಿದೆ.ಇನ್ಮುಂದೆ ಮೈ ಕೊರೆಯುವ ಚಳಿ ಕಾಡಲಿದೆ.ಜೊತೆಗೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.ಛಳಿಗಾಲ ಮುಗಿಯುವ ವರೆಗೂ ಮುನ್ನೆಚ್ಚರಿಕೆ ಅಗತ್ಯ.ಈ ಹಿನ್ನಲೆ ಮೈಸೂರಿನ ಕೆ..ಪಿ.ಕೆ.ಟ್ರಸ್ಟ್ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಮುಂದಾಗಿದೆ.ಜೊತೆಗೆ ಅವಶ್ಯಕತೆ ಇರುವ ಜನರಿಗೆ ಹೊದಿಕೆಗಳನ್ನ ನೀಡುವ ಮೂಲಕ ಸಾಮಾಜಿಕ ಕಳಕಳಿ ಪ್ರದರ್ಶಿಸಿದೆ.

ಇಂದು ಹೆಚ್.ಡಿ.ಕೋಟೆ ಹಾಡಿ ನಿವಾಸಿಗಳಿಗೆ ಹೋದಿಕೆಗಳನ್ನ ವಿತರಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಈ ವೇಳೆ ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್ ಮಾತನಾಡಿ
ಜಿಲ್ಲೆಯಲ್ಲಿ ವ್ಯಾಪಕವಾದ ಛಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿ, ತಂಪಾದ ವಾತಾವರಣ ಕಂಡುಬರುತ್ತದೆ. ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ. ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರುಶೀತ, ನೆಗಡಿ, ಜ್ವರ, ಅಜೀರ್ಣ, ಅಲರ್ಜಿಯಂತ ಸಮಸ್ಯೆಗಳು ಕಂಡುಬರುತ್ತದೆ. ಛಳಿಯ ತೀವ್ರತೆಯಿಂದ ರಕ್ತ ಸಂಚಾರದಲ್ಲಿ ತೊಂದರೆಯಾಗುವ ಸಂಭವವಿದ್ದು ಪಾರ್ಶ್ವವಾಯು, ಅಧಿಕ ಮಧುಮೇಹ, ಕಡಿಮೆ ರಕ್ತದೊತ್ತಡ, ಹೃದಯಘಾತಗಳಾಗುವ ಸಂಭವ ಹೆಚ್ಚಾಗಿರುತ್ತದೆ. ಸ್ವಚ್ಚತೆ ಕಾಪಾಡುವುದು, ಜಂಕ್‍ಪುಢಗಳ ಸೇವನೆ ಮಾಡಬೇಡಿ. ಯೋಗ, ಧ್ಯಾನ, ವ್ಯಾಯಾಮ, ನಡಿಗೆಯಂತಹ ದೈಹಿಕ ಚಟುವಟಿಕೆಗಳು ಮಾಡಬೇಕು. ವಿಟಾಮಿನ್-ಡಿ ಹೊಂದಿರುವ ಸೂರ್ಯನ ಬೆಳೆಕು ಪಡೆಯಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಬಹುದಾಗಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ. ನಿಯಮಿತವಾಗಿ ನೀರು ಕುಡಿಯಿರಿ. ಚಳಿಯಲ್ಲಿ ಸುತ್ತಾಟ ಮಾಡುವುದು ಬೇಡ ಎಂದು ಅನೇಕ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್ ,
ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ , ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಕ್ರಪಾಣಿ, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಮೋಹನ್ ಕುಮಾರ್ ಗೌಡ, ಹಾಗೂ ಇನ್ನಿತರರು ಹಾಜರಿದ್ದರು..

Spread the love

Related post

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್ ಮೈಸೂರು,ಅ13,Tv10 ಕನ್ನಡ ದಸರಾ ವೇಳೆ ಅನಾಹುತ ಸೃಷ್ಠಿಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ…
ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…

Leave a Reply

Your email address will not be published. Required fields are marked *