ಖಾಸಗಿ ಕಂಪನಿಗೆ 12.46 ಲಕ್ಷ ಧೋಖಾ…ಲೆಕ್ಕಾಧಿಕಾರಿ ಹಾಗೂ ಪತಿ ವಿರುದ್ದ FIR ದಾಖಲು…
- Uncategorized
- December 6, 2024
- No Comment
- 52
ಮೈಸೂರು,ಡಿ6,Tv10 ಕನ್ನಡ
12,42,473/- ರೂ ಹಣ ದುರುಪಯೋಗ ಪಡಿಸಿಕೊಂಡು ಕಂಪನಿಗೆ ದ್ರೋಹವೆಸಗಿದ ಲೆಕ್ಕಾಧಿಕಾರಿ ಹಾಗೂ ಆಕೆಯ ಪತಿ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಕಂಪನಿಯ ಮುಖ್ಯಸ್ಥೆ ಭವ್ಯ ಶೆಟ್ಟಿ ರವರು ಲೆಕ್ಕಾಧಿಕಾರಿ ಸವಿತಾ ಹಾಗೂ ಆಕೆಯ ಪತಿ ಆನಂದ್ ವಿರುದ್ದ FIR ದಾಖಲಿಸಿದ್ದಾರೆ.
ಪಿಜಿ ಶೆಟ್ಟಿ ಹ್ಯಾಬಿಟ್ಯಾಟ್ ಸಿಸ್ಟಂ ಇಂಡಿಯಾ ಪ್ರೈ.ಲಿ. ಸಂಸ್ಥೆ 5 ವರ್ಷಗಳ ಹಿಂದೆ ಸರಸ್ವತಿಪುರಂ ನಲ್ಲಿ ಸ್ಥಾಪಿತವಾಗಿದ್ದು ಭವ್ಯಾ ಶೆಟ್ಟಿ ರವರ ತಂದೆಯ ಒಡೆತನದಲ್ಲಿದೆ.ಇದೀಗ ಹೆಬ್ಬಾಳ್ ಇಂಡಸ್ಟ್ರಿಯಲ್ ಪ್ರದೇಶಕ್ಕೆ ವರ್ಗಾವಣೆಗೊಂಡಿದೆ.5 ವರ್ಷಗಳ ಹಿಂದೆ ಮಂಡ್ಯ ಮೂಲದ ಸವಿತಾ ರವರು ಈ ಕಂಪನಿಯಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.ಈ ವೇಳೆ ಸಂಸ್ಥೆಗೆ ಸೇರಬೇಕಾದ ಹಣವನ್ನ ತಮ್ಮ ಪತಿ ಆನಂದ್ ರವರ ಖಾತೆಗೆ ವರ್ಗಾಯಿಸಿದ್ದಾರೆ.ಮೂರು ಟ್ರಾನ್ಸಾಕ್ಷನ್ ನಲ್ಲಿ ಒಟ್ಟು 12,42,473/- ರೂಗಳನ್ನ ಪತಿ ಆನಂದ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.ಈ ಬಗ್ಗೆ ಪ್ರಶ್ನಿಸಿದಾಗ ತಪ್ಪನ್ನ ಒಪ್ಪಿಕೊಂಡು ಹಣ ಹಿಂದಿರುಗಿಸುವುದಾಗಿ ಹೇಳಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.ಹೀಗಿದ್ದೂ ಹಣ ಹಿಂದಿರುಗಿಸದೆ ಸಂಸ್ಥೆಗೆ ದ್ರೋಹ ಮಾಡಿರುವ ಸವಿತಾ ಹಾಗೂ ಆನಂದ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಭವ್ಯಾ ಶೆಟ್ಟಿ ರವರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…