ಗ್ರಾಮ ಠಾಣಾ ಜಾಗ ಇ ಸ್ವತ್ತು ಮಾಡಿಕೊಟ್ಟ ಪಿಡಿಓ…ರದ್ದು ಪಡಿಸುವಂತೆ ಗ್ರಾಮಸ್ಥರಿಂದ ಇಓ ಗೆ ಪತ್ರ…ಷೋ ಕಾಸ್ ನೋಟೀಸ್ ಜಾರಿ ಮಾಡುವಂತೆ ಇಓ ಆದೇಶ…
- TV10 Kannada Exclusive
- December 6, 2024
- No Comment
- 124
ನಂಜನಗೂಡು,ಡಿ5,Tv10 ಕನ್ನಡ
ಗ್ರಾಮ ಠಾಣಾ ಜಾಗ ಒತ್ತುವರಿ ಮಾಡಿಕೊಂಡ ವ್ಯಕ್ತಿಗಳಿಗೆ ಪಿಡಿಓ ಇ ಸ್ವತ್ತು ಮಾಡಿಕೊಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಇದನ್ನ ಪತ್ತೆ ಹಚ್ಚಿದ ಗ್ರಾಮಸ್ಥರು ಇ ಸ್ವತ್ತನ್ನ ರದ್ದು ಪಡಿಸುವ ಇಓ ಪತ್ರ ಬರೆದಿದ್ದಾರೆ.ಎಚ್ಚೆತ್ತ ಪಿಡಿಓ ಇ ಸ್ವತ್ತನ್ನ ರದ್ದುಪಡಿಸುವಂತೆ ಇಓ ಗೆ ಪತ್ರ ಬರೆದಿದ್ದಾರೆ.ಆದ್ರೆ ಅಕ್ರಮ ಎಸಗಿದ ಹಿನ್ನಲೆ ಷೋಕಾಸ್ ನೋಟೀಸ್ ಜಾರಿ ಮಾಡುವಂತೆ ಪಿಡಿಓ ಗೆ ಸೂಚನೆ ನೀಡಿದ್ದಾರೆ.
ಹೆಡಿಯಾಲ ಗ್ರಾಮಪಂಚಾಯ್ತಿ ವ್ಯಾಪ್ತಿಯ ವಡೆಯನಪುರ ಗ್ರಾಮದ ಸರ್ವೆ ನಂ 1/2 ರ ಎರಡು ಎಕ್ರೆ ಜಮೀನು ಗ್ರಾಮಠಾಣಾ ಸ್ವಾಧೀನದಲ್ಲಿದೆ.ಈ ಪೈಕಿ 14 ಗುಂಟೆ ಜಮೀನನ್ನ ಸಿದ್ದರಾಮೇಗೌಡ,ರವಿಕುಮಾರ್,ಮಹದೇವಸ್ವಾಮಿ ಹಾಗೂ ಸಿದ್ದರಾಮ ರವರು ಇ ಸ್ವತ್ತು ಮಾಡಿಸಿಕೊಂಡಿದ್ದಾರೆ.ಈ ಅಕ್ರಮವನ್ನ ಪತ್ತೆ ಹಚ್ಚಿದ ವಡೆಯನಪುರ ಗ್ರಾಮಸ್ಥರು ಪರಿಶೀಲನೆ ನಡೆಸಿ ಒತ್ತುವರಿಯನ್ನ ತೆರವುಗೊಳಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.ಈ ವೇಳೆ ಎಚ್ಚೆತ್ತ ಪಿಡಿಓ ಇ ಸ್ವತ್ತನ್ನ ರದ್ದುಪಡಿಸುವಂತೆ ಇಓ ರವರಿಗೆ ಪತ್ರ ಬರೆದಿದ್ದಾರೆ.ತಾನೇ ಮಾಡಿದ ಅಕ್ರಮವನ್ನ ಮುಚ್ಚಿಕೊಳ್ಳಲು ತಾನೇ ಇಓ ಗೆ ಪತ್ರ ಬರೆದ ಪಿಡಿಓ ಸಿಕ್ಕಿಬಿದ್ದಿದ್ದಾನೆ.ದಾಖಲೆಗಳನ್ನ ಪರಿಶೀಲಿಸಿದ ಇಓ ಅಕ್ರಮ ಎಸಗಿದ ಪಿಡಿಓ ಗೆ ಷೋಕಾಸ್ ನೋಟೀಸ್ ನೀಡುವಂತೆ ಪತ್ರದ ಮೇಲೆ ಹಿಂಬರಹ ಹಾಕಿ ಸೂಚನೆ ನೀಡಿದ್ದಾರೆ.ಇ ಸ್ವತ್ತು ಮಾಡುವ ವೇಳೆ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಮಂಡಿಸಿ ಅಧ್ಯಕ್ಷರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಬೇಕು.ನಂತರ ವಾರ್ಡ್ ನ ಸದಸ್ಯರೂ ಸಹ ಸಮ್ಮತಿಸಬೇಕೆಂಬ ನಿಯಮವಿದೆ.ಆದ್ರೆ ಇಲ್ಲಿ ಈ ನಿಯಮಗಳನ್ನ ಪಾಲಿಸದ ಪಿಡಿಓ ಏಕಾ ಏಕಿ ಅಕ್ರಮವಾಗಿ ಈ ಸ್ವತ್ತು ಮಾಡಿಕೊಟ್ಟಿದ್ದಾರೆಂದು ಆರೋಪ ಕೇಳಿ ಬಂದಿದೆ.ಸಧ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ.ಇದನ್ನೇ ಬಂಡವಾಳ ಮಾಡಿಕೊಂಡಿರುವ ಪಿಡಿಓ ಅಕ್ರಮ ಎಸಗಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.
ಇ ಸ್ವತ್ತು ಮಾಡುವ ವೇಳೆ ಐನಾತಿಗಳು ಸದರಿ ಜಮೀನಿನ ಬಗ್ಗೆ ಯಾವುದೇ ತಕರಾರು ಬಂದಲ್ಲಿ ಅಥವಾ ಯಾವುದೇ ವ್ಯಕ್ತಿಗಳು ಸೂಕ್ತ ದಾಖಲೆ ಒದಗಿಸಿದಲ್ಲಿ ಜಮೀನು ಬಿಟ್ಟುಕೊಡುವುದಾಗಿ ನೋಟರಿ ಮಾಡಿಸಿರುವ ದಾಖಲೆಯಲ್ಲಿ ಒಪ್ಪಿಕೊಂಡಿದ್ದಾರೆ.ಅಂದರೆ ಸದರಿ ಜಮೀನಿಗೂ ಇವರಿಗೂ ಯಾವುದೇ ಸಂಭಂಧ ಇಲ್ಲದಿದ್ದರೂ ಲಪಟಾಯಿಸುವ ಉದ್ದೇಶದಿಂದ ಪಿಡಿಓ ಜೊತೆ ಶಾಮೀಲಾಗಿ ಇ ಸ್ವತ್ತನ್ನ ಮಾಡಿಸಿಕೊಂಡಿರುವುದು ಸಾಬೀತಾಗುತ್ತಿದೆ.ಇವೆಲ್ಲವನ್ನೂ ಪರಿಗಣಿಸಿರುವ ಇಓ ಷೋಕಾಸ್ ನೋಟೀಸ್ ಜಾರಿ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ.ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದ ಜಾಗವನ್ನ ಕಬಳಿಸಿದ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಗ್ರಾಮಸ್ಥರ ಹೋರಾಟಕ್ಕೆ ಜಯ ದೊರೆತಂತಾಗಿದ್ದು ಕೋಟ್ಯಾಂತರ ಬೆಲೆ ಬಾಳುವ ಜಾಗ ಸರ್ಕಾರಕ್ಕೆ ಉಳಿಯಲಿದೆ…