ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ…ಓರ್ವನ ಕೊಲೆಯಲ್ಲಿ ಅಂತ್ಯ…
- TV10 Kannada Exclusive
- December 7, 2024
- No Comment
- 244
ಮೈಸೂರು,ಡಿ7,Tv10 ಕನ್ನಡ
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಕಾಲೋನಿಯಲ್ಲಿ ನಡೆದಿದೆ.ಮುದಾಸಿರ್ ಪಾಷಾ(38) ಮೃತ ದುರ್ದೈವಿ.ರಿಜ್ವಾನ್ ಕೊಲೆ ಮಾಡಿದ ಸ್ನೇಹಿತ.
ಇಬ್ಬರು ಕೂಲಿ ಕೆಲಸ ಮಾಡಿ ಕೆಸಿಬಿ ಸಮುದಾಯದ ಭವನದ ಬಳಿ ಮಲಗಿದ್ದರು.ನಿನ್ನೆ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ.ಈ ವೇಳೆ ಸಿಮೆಂಟ್ ಇಟ್ಟಿಗೆಯಿಂದ ರಿಜ್ವಾನ್ ತನ್ನ ಸ್ನೇಹಿತ ಮುದಾಸಿರ್ ಪಾಷಾ ತಲೆಗೆ ಹೊಡೆದಿದ್ದಾನೆ.ಮುದಾಸಿರ್ ಪಾಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಆರೋಪಿ ರಿಜ್ವಾನ್ ನ ಉದಯಗಿರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ…