ಪತಿಯ ಹಣ ವಸೂಲಿಗಾಗಿ ಲೇಡಿ ಡಾನ್ ಆದ ಪತ್ನಿ…ಖಾಸಗಿ ಕಂಪನಿ ಮುಖ್ಯಸ್ಥನಿಗೆ ಪ್ರಾಣ ಬೆದರಿಕೆ…ಕಚೇರಿಗೆ ನುಗ್ಗಿ ಆವಾಜ್…
- TV10 Kannada Exclusive
- December 7, 2024
- No Comment
- 130
ಮೈಸೂರು,ಡಿ7,Tv10 ಕನ್ನಡ
ಗಂಡನ ಹಣ ವಸೂಲಿ ಮಾಡಲು ಹಿಂದೆ ವ್ಯವಹಾರ ನಡೆಸುತ್ತಿದ್ದ ಕಂಪನಿ ಕಚೇರಿಗೆ ಸಹಚರರ ಜೊತೆ ನುಗ್ಗಿದ ಪತ್ನಿ ಲೇಡಿ ಡಾನ್ ನಂತೆ ವರ್ತಿಸಿ ಕೊಲೆ ಬೆದರಿಕೆ ಹಾಕಿ ಕಚೇರಿ ಧ್ವಂಸ ಮಾಡುವುದಾಗಿ ಆವಾಜ್ ಹಾಕಿ ನೌಕರರಿಗೆ ಕಿರುಕುಳ ನೀಡಿದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಗ್ರಾಮದ ನಿವಾಸಿ ಸುಮಿತ್ರ ಲೇಡಿ ಡಾನ್ ನಂತೆ ವರ್ತಿಸಿದ ಮಹಿಳೆ.ಸಧ್ಯ ಸುಮಿತ್ರಳ ಆವಾಜ್ ಗೆ ಹೆದರಿದ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ್ ನಾಯಕ್ ರವರು ಕಾನೂನು ಕ್ರಮ ಜರುಗಿಸುವಂತೆ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೋಮಶೇಖರ್ ನಾಯಕ್ ರವರು ಮೈಸೂರಿನ ಸರಸ್ವತಿಪುರಂ ನಲ್ಲಿ ವಿದ್ವತ್ ಇನ್ಸ್ಟ್ರಾ ಪ್ರೈ.ಲಿಮಿಟೆಡ್ ಎಂಬ ಹೆಸರಿನಲ್ಲಿ ಸಂಸ್ಥೆ ನಡೆಸುತ್ತಿದ್ದಾರೆ.ಸ್ನೇಹಿತ ನಂದನ್ ಗೌಡ ಎಂಬಾತ 15 ವರ್ಷಗಳಿಂದ ವ್ಯವಹಾರಿಕವಾಗಿ ಪರಿಚಯವಿದ್ದು ಇದೀಗ ಸಂಭಂಧ ಕಳೆದುಕೊಂಡಿದ್ದಾನೆ.ಕೆಲವು ದಿನಗಳಿಂದ ಯಾವುದೇ ವ್ಯವಹಾರ ಇಲ್ಲದಿದ್ದರೂ ನಂದನ್ ಗೌಡ ಪತ್ನಿ ಸುಮಿತ್ರ ಕೆಲವು ಸಹಚರರ ಜೊತೆ ಕಚೇರಿಗೆ ನುಗ್ಗಿ ಗಂಡನ ಹಣ ಕೊಡುವಂತೆ ಧಂಕಿ ಹಾಕಿದ್ದಾಳೆ.ನಿನ್ನ ಜೊತೆ ವ್ಯವಹಾರ ಮಾಡುವಾಗ ಹಣ ಕಳೆದುಕೊಂಡಿರುವುದಾಗಿ ಆರೋಪಿಸಿ ಹಣ ನೀಡುವಂತೆ ಆಗ್ರಹಿಸಿ ಕೊಲೆ ಬೆದರಿಕೆ ಹಾಕಿದ್ದಾಳೆ.ಮಹಿಳಾ ಸಂಘಗಳು,ರಾಜಕೀಯ ನಾಯಕರು,ರೌಡಿಗಳ ಬೆಂಬಲ ಇದೆ ಎಂದು ಧಂಕಿ ಹಾಕಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿ ಲೇಡಿ ಡಾನ್ ನಂತೆ ವರ್ತಿಸಿದ್ದಾಳೆ.ಹಣ ಕೊಡದಿದ್ದಲ್ಲಿ ಕಚೇರಿ ಧ್ವಂಸ ಮಾಡಿಸುವುದಾಗಿ ಹಾಗೂ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಸುಮಿತ್ರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸೋಮಶೇಖರ್ ನಾಯಕ್ ಸರಸ್ವತಿಪುರಂ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…