ಅಂತರ್ಜಾತಿ ವಿವಾಹ ಎಫೆಕ್ಟ್…ದಲಿತ ಯುವಕರ ಮೇಲೆ ಸವರ್ಣೀಯರಿಂದ ಹಲ್ಲೆ ಆರೋಪ…ಮೂವರು ಆಸ್ಪತ್ರೆಗೆ ದಾಖಲು…
- TV10 Kannada Exclusive
- December 10, 2024
- No Comment
- 17
ನಂಜನಗೂಡು,ಡಿ10,Tv10 ಕನ್ನಡ
ಅಂತರ್ಜಾತಿ ವಿವಾಹ ನಡೆದ ಹಿನ್ನಲೆ ಮೂವರು ದಲಿತ ಯುವಕರ ಮೇಲೆ ಸವರ್ಣೀಯರಿಂದ ಹಲ್ಲೆ ನಡೆದ ಘಟನೆ ನಂಜನಗೂಡು ತಾಲೂಕು ಗೀಕಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಗ್ರಾಮದ ಆಕಾಶ್,ನಿತಿನ್ ಮತ್ತು ಸಂತೋಷ್ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗೀಕಳ್ಳಿಯಲ್ಲಿ ಅಂತರ್ಜಾತಿ ವಿವಾಹ ನೆರವೇರಿತ್ತು.ಈ ಸಂಭಂಧ ಎರಡು ಕೋಮುಗಳ ನಡುವೆ ಧ್ವೇಷ ಬೆಳೆದಿತ್ತು ಎನ್ನಲಾಗಿದೆ.ನಿನ್ನೆ ರಾತ್ರಿ ಇದನ್ನೇ ನೆಪ ಮಾಡಿಕೊಂಡ ಒಂದು ಜಾತಿಯ ಯುವಕರು ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.ಗಾಯಗೊಂಡ ಯುವಕರಿಗೆ ದಲಿತ ಸಂಘಟನೆಯ ಮುಖಂಡರು ಆತ್ಮಸ್ಥೈರ್ಯ ತುಂಬಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲೇ ದಲಿತರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿರುವ ಮುಖಂಡರು ಕೂಡಲೇ ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸಬೇಕು.ದಲಿತರಿಗೆ ರಕ್ಷಣೆ ಒದಗಿಸಬೇಕು.ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ…