ಮಾಜಿ ಸಿಎಂ ಎಸ್.ಎಂ ಕೃಷ್ಣ ಅಗಲಿಕೆ…ಗಣಪತಿ ಶ್ರೀಗಳ ಸಂತಾಪ…

ಮಾಜಿ ಸಿಎಂ ಎಸ್.ಎಂ ಕೃಷ್ಣ ಅಗಲಿಕೆ…ಗಣಪತಿ ಶ್ರೀಗಳ ಸಂತಾಪ…

ಮೈಸೂರು,ಡಿ10,Tv10 ಕನ್ನಡ

ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಮುಕ್ತಿಗಾಗಿ ಪ್ರಾರ್ಥಿಸಿದ್ದಾರೆ. ಎಸ್.ಎಂ.ಕೃಷ್ಣರವವರು ನಲವತ್ತು ವರ್ಷಗಳಿಂದ ಮೈಸೂರಿನ ಅವಧೂತ ದತ್ತ ಪೀಠಕ್ಕೆ ಬರುತ್ತಿದ್ದರು ಹಾಗೂ ಸ್ವಾಮೀಜಿ ಅವರ ಬಗ್ಗೆ ಅಪಾರ ಭಕ್ತಿ ಗೌರವಗಳನ್ನು ಹೊಂದಿದ್ದರು.ಕೃಷ್ಣ ರವರು ಈ ನಾಡು ಕಂಡ ಅಪ್ರತಿಮ ಹಾಗೂ ಅಪರೂಪ ನಾಯಕ. ಅವರ ಅವಧಿಯಲ್ಲಿ ಬೆಂಗಳೂರು ಹಾಗು ರಾಜ್ಯವು ಅಪಾರ ಅಭಿವೃದ್ಧಿ ಕಂಡು ಅವರ ದೀರ್ಘ ದೃಷ್ಟಿತ್ವ ಹಾಗೂ ನಾಯಕತ್ವಕ್ಕೆ ಸಾಕ್ಷಿಯಾಯಿತು.ಎಸ್.ಎಂ.ಕೃಷ್ಣ ರವರು ಆಧ್ಯಾತ್ಮ ವಿಷಯಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದವರಾಗಿದ್ದು, ಪೂಜ್ಯ ಸ್ವಾಮೀಜಿಯವರೊಂದಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು.
ಮೃತರ ಆತ್ಮಕ್ಕೆ ಶಾಂತಿ ಹಾಗೂ ಮುಕ್ತಿ ದೊರೆಯಲೆಂದು, ಹಾಗು ಬಂಧುವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪೂಜ್ಯ ಸ್ವಾಮೀಜಿಯವರು ಪ್ರಾರ್ಥಿಸಿದ್ದಾರೆ…

Spread the love

Related post

ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ…ತಾಯಿ ಪತ್ತೆ…

ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ…ತಾಯಿ ಪತ್ತೆ…

ಎಚ್.ಡಿ.ಕೋಟೆ,ಜ11,Tv10 ಕನ್ನಡ ನಾಲ್ಕು ದಿನಗಳ ಹಿಂದೆ ನವಜಾತ ಗಂಡು‌ ಶಿಶುವಿನ ಪ್ರಕರಣದ ಸಂಭಂಧ ಇದೀಗ ಪಾಪಿ ತಾಯಿ ಪತ್ತೆಯಾಗಿದ್ದಾಳೆ.ಆರೋಗ್ಯ ಇಲಾಖೆ ಅಧಿಕಾರಿಗಳು ಹರಸಾಹಸ ನಡೆಸಿ ತಾಯಿಯನ್ನ ಪತ್ತೆ ಮಾಡಿದ್ದಾರೆ.16…
ಅಪ್ರಾಪ್ತ ಬೈಕ್ ಚಾಲನೆ…25 ಸಾವಿರ ದಂಡ ವಸೂಲಿ…ಗದಗ್ ನ್ಯಾಯಾಲಯದ ಆದೇಶದ ಮೇರೆಗೆ ಫೈನ್…

ಅಪ್ರಾಪ್ತ ಬೈಕ್ ಚಾಲನೆ…25 ಸಾವಿರ ದಂಡ ವಸೂಲಿ…ಗದಗ್ ನ್ಯಾಯಾಲಯದ ಆದೇಶದ ಮೇರೆಗೆ…

ಗದಗ್,ಜ9,Tv10 ಕನ್ನಡ ಅಪ್ರಾಪ್ತರಿಗೆ ಬೈಕ್ ಚಾಲನೆಗೆ ಅವಕಾಶ ನೀಡುವ ಪೋಷಕರೇ ಎಚ್ಚರ ಸಿಕ್ಕಿಬಿದ್ದಲ್ಲಿ ಭಾರಿ ದಂಡ ಕಟ್ಟಬೇಕಾದ್ದು ಗ್ಯಾರೆಂಟಿ.ಗದಗ್ ನ್ಯಾಯಾಲಯ ಇಂತಹ ಒಂದು ಪ್ರಕರಣದಲ್ಲಿ 25 ಸಾವಿರ ದಂಡ…

ನಿಮ್ಮ ಜಾತಿ ಇರೋದು ಒಂದೇ ಕುಟುಂಬ…ಗ್ರಾಮ ಬಿಟ್ಟು ತೊಲಗಿ…ಕುಟುಂಬವೊಂದಕ್ಕೆ ಟಾರ್ಚರ್…ಜಾಗದ ವಿಚಾರದಲ್ಲಿ ಬೆದರಿಕೆ…ಮೂವರ ವಿರುದ್ದ FIR ದಾಖಲು… ಮೈಸೂರು,ಜ3,Tv10 ಕನ್ನಡ ಜಾಗವೊಂದರ ವಿವಾದ ವಿಚಾರ ನ್ಯಾಯಾಲಯದಲ್ಲಿ ದಾವೆ ಇದ್ದರೂ…

Leave a Reply

Your email address will not be published. Required fields are marked *