ಮೆಡಿಕಲ್ ಕಾಲೇಜು ವಿಧ್ಯಾರ್ಥಿನಿ ಮೇಲೆ ಬಲತ್ಕಾರಕ್ಕೆ ಯತ್ನ…ಮನೆ ಮಾಲೀಕನ ವಿರುದ್ದ FIR ದಾಖಲು…
- TV10 Kannada Exclusive
- December 12, 2024
- No Comment
- 532
ಮೈಸೂರು,ಡಿ12,Tv10 ಕನ್ನಡ
ಜೆಎಸ್ ಎಸ್ ಮೆಡಿಕಲ್ ಕಾಲೇಜು ವಿಧ್ಯಾರ್ಥಿನಿ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಾಡಿಗೆ ನೀಡಿದ್ದ ಮನೆ ಮಾಲೀಕನ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬನ್ನಿಮಂಟಪ ಜೆಎಸ್ ಎಸ್ ನಗರದ ನಿವಾಸಿ ಅಮಾನುಲ್ಲಾ ಖಾನ್ ವಿರುದ್ದ FIR ದಾಖಲಾಗಿದೆ.ಕೇರಳ ಮೂಲದ ವಿಧ್ಯಾರ್ಥಿನಿ ಪ್ರಕರಣ ದಾಖಲಿಸಿದ್ದಾರೆ.
ಜೂನ್ ನಲ್ಲಿ ಅಮಾನುಲ್ಲಾಖಾನ್ ರವರ ಮನೆಯಲ್ಲಿ ಕೊಠಡಿ ಬಾಡಿಗೆ ಪಡೆದ ವಿಧ್ಯಾರ್ಥಿನಿ ತಂಗಿದ್ದಳು.ಒಂಟಿಯಾಗಿ ಇದ್ದ ಸಮಯವನ್ನ ಬಳಸಿಕೊಂಡ ಅಮಾನುಲ್ಲಾಖಾನ್ ಕೊಠಡಿಗೆ ನುಗ್ಗಿ ವಿಧ್ಯಾರ್ಥಿನಿಯ ಬಟ್ಟೆ ಹಿಡಿದು ಎಳೆದಾಡಿ ಮೊಬೈಲ್ ಕಿತ್ತು ಬಿಸಾಕಿ ನನ್ನ ಜೊತೆ ಸೆಕ್ಸ್ ಮಾಡಲು ಸಹಕರಿಸದಿದ್ದರೆ ಸಾಯಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ.ಕೂಡಲೇ ವಿಧ್ಯಾರ್ಥಿನಿ ಅಮಾನುಲ್ಲಾ ಖಾನ್ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಮನೆಯಿಂದ ಹೊರಗೆ ಬಂದು ಆಕೆಯ ಫಿಯಾನ್ಸಿಗೆ ಮಾಹಿತಿ ತಿಳಿಸಿ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ…