ಅಕ್ರಮ ಸಂಭಂಧ ವಿರೋಧಿಸಿದ್ದೇ ತಪ್ಪಾಯ್ತು…ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ…ಪತಿ ಹಾಗೂ ಪ್ರಿಯತಮೆ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- December 12, 2024
- No Comment
- 206
ಮೈಸೂರು,ಡಿ12,Tv10 ಕನ್ನಡ
ಅಕ್ರಮ ಸಂಭಂಧವನ್ನ ವಿರೋಧಿಸಿ ಪ್ರಶ್ನಿಸಿದ ಪತ್ನಿ ಹಾಗೂ ಮಗಳ ಮೇಲೆ ಪ್ರಿಯತಮೆ ಜೊತೆ ಸೇರಿ ಪತಿರಾಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಂಗಳೂರಿನ ಶ್ವೇತಾ ಎಂಬುವರು ತಮ್ಮ ಪತಿ ಸಂತೋಷ್ ಕುಮಾರ್ ಹಾಗೂ ಆತನ ಪ್ರಿಯತಮೆ ಶ್ವೇತಾ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ವೇತಾ ಹಾಗೂ ಸಂತೋಷ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಬೆಂಗಳೂರಿನ ಕೆಂಗೇರಿಯ ಲಿಂಗಧೀರನಹಳ್ಳಿ ಬಡಾವಣೆ ನಿವಾಸಿಗಳು.ಇಬ್ಬರ ಅನ್ಯೋನ್ಯ ದಾಂಪತ್ಯ ಜೀವನಕ್ಕೆ ಬಿರುಗಾಳಿಯಂತೆ ಎಂಟ್ರಿ ಕೊಟ್ಟವಳು ಶಿಲ್ಪಾ.ಸುಮಾರು 6 ತಿಂಗಳ ಹಿಂದೆ ಸಂತೋಷ್ ಕುಮಾರ್ ಜೀವನಕ್ಕೆ ಶಿಲ್ಪಾ ಎಂಟ್ರಿಕೊಟ್ಟ ಪರಿಣಾಮ ಶ್ವೇತಾ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತು.ಆಗಾಗ ಮೊಬೈಲ್ ನಲ್ಲಿ ಸಂತೋಷ್ ಕುಮಾರ್ ಜೊತೆ ಮಾತನಾಡಿ ಅಶ್ಲೀಲ ಮೆಸೇಜ್ ಗಳನ್ನ ಹಾಕುತ್ತಾ ಹತ್ತಿರವಾದ ಶಿಲ್ಪಾ ಕ್ರಮೇಣ ದಂಪತಿಯ ದಾಂಪತ್ಯ ಜೀವನಕ್ಕೆ ಮುಳ್ಳಾದರು.ಶಿಲ್ಪಾ ಪ್ರೇರೇಪಣೆಯಿಂದ ಸಂತೋಷ್ ಕುಮಾರ್ ಆಗಾಗ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿ ರಂಪಾಟ ಮಾಡುತ್ತಿದ್ದ.ಈ ಬಗ್ಗೆ ಈ ಹಿಂದೆ ಶ್ವೇತಾ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ದ ದೂರು ದಾಖಲಿಸಿದ್ದರು.ಈ ಬೆಳವಣಿಗೆಯಿಂದ ಇಬ್ಬರು ಮಕ್ಕಳ ಮೇಲೆ ಪರಿಣಾಮ ಬೀರಿತು.ಕಿರಿ ಮಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಮೈಸೂರಿನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು.ಮಗಳನ್ನ ನೋಡಲು ಶ್ವೇತಾ ತನ್ನ ಹಿರಿ ಮಗಳ ಜೊತೆ ಮೈಸೂರಿಗೆ ಬಂದಾಗ ಬನ್ನಿಮಂಟಪದ ಎಲ್.ಐ.ಸಿ.ಸರ್ಕಲ್ ಬಳಿ ಸಂತೋಷ್ ಕುಮಾರ್ ಹಾಗೂ ಪ್ರಿಯತಮೆ ಶಿಲ್ಪಾ ಎದುರಾಗಿ ಶ್ವೇತಾ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.ಹಲ್ಲೆಗೊಳಗಾದ ಶ್ವೇತಾ ಘಟನೆಯಿಂದ ಚೇತರಿಕೆಯಾದ ನಂತರ ಎನ್.ಆರ್.ಠಾಣೆಯಲ್ಲಿ ಪತಿ ಹಾಗೂ ಆತನ ಪ್ರಿಯತಮೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…