
ಎಸ್ ಎಂ ಕೃಷ್ಣ ಅವರ ಅಂತಿಮ ಕ್ರಿಯೆ ಅತ್ಯಂತ ಗೌರವಯುತವಾಗಿ ನಡೆದಿದೆ…ಸರ್ಕಾರದ ನಡುವಳಿಕೆ ಮೆಚ್ಚುವಂತದ್ದು…ಎಂಎಲ್ಸಿ ಹೆಚ್.ವಿಶ್ವನಾಥ್…
- TV10 Kannada Exclusive
- December 12, 2024
- No Comment
- 54

ಮೈಸೂರು,ಡಿ12,Tv10 ಕನ್ನಡ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ಅಂತ್ಯಕ್ರಿಯೆ ಗೌರವಯುತವಾಗಿ ನಡೆದಿದೆ.ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಮೆಚ್ಚುಗೆ ವ್ಯಕ್ತಪಡಿಸುವಂತಹದ್ದು.
ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಇದೇ ವೇಳೆ ಮಾತನಾಡಿ
ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದರು.ಆದರೆ ಸೋನಿಯಾಗಾಂಧಿ ತುಟಿ ಬಿಚ್ಚಲಿಲ್ಲ.ಒಬ್ಬ ವ್ಯಕ್ತಿ ಕಾಲವಾದಾಗ ಮನುಷ್ಯತ್ವ ಇರಬೇಕು, ದ್ವೇಷ ಇರಬಾರದು.
ಸತ್ತಾಗಲೂ ದ್ವೇಷ ಮಾಡುವುದು ಸರಿಯಲ್ಲ.
ಸಾರ್ವಜನಿಕ ಜೀವನದಲ್ಲಿರುವವರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು.
ಕಾಂಗ್ರೆಸ್ ನ ಹಿರಿಯ ನಾಯಕರು ದೇವರಾಜ ಅರಸ್ ಸತ್ತಾಗಲೂ ಸಹ ಸಂತಾಪ ಸೂಚಿಸಲಿಲ್ಲ.
ಪಿ ವಿ ನರಸಿಂಹರಾವ್ ಸಾವನ್ನಪಿದಾಗಲೂ ಸಂತಾಪ ಸೂಚಿಸಲಿಲ್ಲ.
ವಿ ಪಿ ಸಿಂಗ್ ಹಾಗೂ ಚಂದ್ರಶೇಖರ್ ಸತ್ತಾಗಲೂ ಸಂತಾಪ ಸೂಚಿಸಲಿಲ್ಲ.ಹಲವು ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಗೆ ಹೆಸರು ತಂದುಕೊಟ್ಟಿದ್ದು ಎಸ್ ಎಂ ಕೃಷ್ಣ ಅವರು.
ಸಾವಿನಲ್ಲೂ ರಾಜಕಾರಣ, ಪಕ್ಷ ದ್ವೇಷ ಮುಖ್ಯವಾಗಬಾರದು.
ಮೈಸೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಿಂದಲೂ ಒಂದು ಸಂತಾಪ ಸೂಚಿಸಲಿಲ್ಲ.
ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದೆ.ಇದಕ್ಕೆಲ್ಲ ಎಸ್ ಎಂ ಕೃಷ್ಣ ಕಾರಣರು.ಬ್ಯುಸಿನೆಸ್, ಇಂಡಸ್ಟ್ರಿ ಮನುಷ್ಯತ್ವ ಕಳೆದುಕೊಂಡಿವೆ.
ಮೈಸೂರಿನ ರಿಂಗ್ ರೋಡ್ ನಿರ್ಮಾಣ ಮಾಡಿದ್ದು ಎಸ್ ಎಂ ಕೃಷ್ಣ ಅವರು.ರಿಂಗ್ ರೋಡ್ ಗೆ ಅವರ ಹೆಸರಿಡಬೇಕು.
ಮೈಸೂರನ್ನು ಹೆರಿಟೇಜ್ ಸಿಟಿ ಮಾಡಿದ್ದು ಸಹ ಎಸ್ ಎಂ ಕೃಷ್ಣ.
ಪಾರಂಪರಿಕ ನಗರವನ್ನು ಈಗಿನ ಸರ್ಕಾರ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಆಗ್ರಹಿಸಿದರು…