ಕಾಲೇಜು ವಿಧ್ಯಾರ್ಥಿಗಳಿಗೆ ಸೈಬರ್ ಕ್ರೈಂ ಕುರಿತು ಜಾಗೃತಿ…
- TV10 Kannada Exclusive
- December 12, 2024
- No Comment
- 31
ಮೈಸೂರು,ಡಿ12,Tv10 ಕನ್ನಡ
ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಮೈಸೂರಿನ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಾಜ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳಿಗೆ ಇಂದು Prevention of Crime & Cyber Safe Girl ಎಂಬ ವಿಷಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ದೇವರಾಜ ಪೊಲೀಸ್ ಠಾಣೆಯ ಪಿಎಸ್ಐ ಜೈಕೀರ್ತಿ ರವರು ಉಪನ್ಯಾಸ ನೀಡಿದರು.ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಗಳು ಹೆಚ್ಚುತ್ತಿವೆ.ಯುವ ಜನಾಂಗ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ.ನಯವಂಚಕರು ಅಮಾಯಕರನ್ನ ನಾನಾ ವಿಧಾನದ ಆಮಿಷಗಳನ್ನ ತೋರಿಸಿ ಆಕರ್ಷಿಸುತ್ತಾರೆ.ನಂತರ ಮಾಹಿತಿಗಳನ್ನ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಿನ್ನೆಲೆಯಲ್ಲಿ ಮಕ್ಕಳು ಸೋಷಿಯಲ್ ಮೀಡಿಯಾ ದಲ್ಲಿ ಅಪರಿಚಿತ ವ್ಯಕ್ತಿಗಳ ಫ್ರೆಂಡ್ ರಿಕ್ವೆಸ್ಟ್ ಗಳನ್ನು ಅಕ್ಸೆಪ್ಟ್ ಮಾಡದೇ ಎಚ್ಚರ ವಹಿಸಬೇಕು, ತಮ್ಮ ಖಾಸಗಿ ಫೋಟೋ ಗಳನ್ನು ಯಾರಿಗೂ ಸಹ ಶೇರ್ ಮಾಡಬಾರದು,ತುರ್ತು ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಉಪಯೋಗ ಮಾಡುವಂತೆ ಸಲಹೆ ನೀಡಿದರು. 112, 1098 ಸಹಾಯವಾಣಿ ಗಳ ಉಪಯುಕ್ತತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮೂಲಕ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಎಂ. ಜಿ. ರಮಾನಂದ್, ದೇವರಾಜ ಪೊಲೀಸ್ ಠಾಣೆ ನೀರಿಕ್ಷಕ ಟಿ ಬಿ ಶಿವಕುಮಾರ್, ಪಿ ಎಸ್ ಐ ಪ್ರಭು ಹಾಗೂ ಸಿಬ್ಬಂದಿ ಹಾಜರಿದ್ದರು…