ಹನುಮ ಜಯಂತಿ ಹಿನ್ನಲೆ…ಹುಣಸೂರು ಪಟ್ಟಣದಾದ್ಯಂತ ಮೂರು ದಿನಗಳ ಕಾಲ ಮಧ್ಯ ಮಾರಾಟ ನಿಷೇಧ…
- TV10 Kannada Exclusive
- December 12, 2024
- No Comment
- 77
ಹುಣಸೂರು,ಡಿ12,Tv10 ಕನ್ನಡ
ಹನುಮ ಜಯಂತಿ ಹಿನ್ನಲೆ ಡಿ.13 ರಿಂದ ಹುಣಸೂರು ತಾಲೂಕಿನಾದ್ಯಂತ ಹಾಗೂ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮ ಮತ್ತು ಹೆಚ್.ಡಿ.ಕೋಟೆಚತಾಲೂಕಿನ ಅಣ್ಣೂರು ಗ್ರಾಮದಲ್ಲಿ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.ಡಿ13 ಸಂಜೆ 6 ಗಂಟೆಯಿಂದ ಡಿ.15 ಮಧ್ಯರಾತ್ರಿ 12 ರ ವರೆಗೆ ಮಧ್ಯದ ಅಂಗಡಿಗಳಲ್ಲಿ ಮಧ್ಯ ಮಾರಾಟ ನಿಷೇಧಿಸಲಾಗಿದೆ.ಮೂರು ದಿನಗಳ ಕಾಲ ಹನುಮ ಜಯಂತಿವಹಿನ್ನಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ಹೋಮ ಹವನಗಳು,ವಿಶೇಷ ಪೂಜೆಗಳು ಹಾಗೂ ಅದ್ದೂರಿ ಮೆರವಣಿಗೆ ಆಯೋಜಿಸಿರುವ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ರವರ ಪ್ರಸ್ತಾವನೆಯಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ…