ಅಪರಾಧ ತಡೆ ಮಾಸಾಚರಣೆ…ಹಿರಿಯ ನಾಗರೀಕರಿಗೆ ಸೈಬರ್ ಕ್ರೈಂ ಕುರಿತು ಜಾಗೃತಿ…ಕುವೆಂಪುನಗರ ಠಾಣೆಯಲ್ಲಿ ಕಾರ್ಯಕ್ರಮ…
- TV10 Kannada Exclusive
- December 16, 2024
- No Comment
- 39
ಮೈಸೂರು,ಡಿ16,Tv10 ಕನ್ನಡ
ಅಪರಾಧ ತಡೆ ಮಾಸಾಚರಣೆ ಹಿನ್ನಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರೀಕರಿಗೆ ಸೈಬರ್ ಕ್ರೈಂ ಸೇರಿದಂತೆ ಇತರ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇತ್ತೀಚೆಗೆ ಹೆಚ್ಚಿನ ಲಾಭದ ಆಮಿಷ ನೀಡಿ ಸಾಮಾಜಿಕ ಜಾಲತಾಣಗಳ ಮೂಲಕ ಹಿರಿಯ ನಾಗರೀಕರನ್ನೇ ಗುರಿಯಾಗಿ ಇಟ್ಟುಕೊಂಡು ವಂಚಕರು ಲಕ್ಷಾಂತರ ರೂಗಳಿಗೆ ಪಂಗನಾಮ ಹಾಕುತ್ತಿರುವ ಪ್ರಕರಣಗಳು ದಾಖಲಾಗುತ್ತಿದೆ.ಈ ಹಿನ್ನಲೆ ಹಿರಿಯ ನಾಗರೀಕರಿಗೆ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಮಾಹಿತಿ ಒದಗಿಸಲಾಯಿತು.ಇದರ ಜೊತೆಗೆ ಕೆಲಸ ಕೊಡುಸುವ ನೆಪದಲ್ಲಿ,ಲಕ್ಕಿಡಿಪ್ ಗಳ ಮೂಲಕ ನಡೆಯುವ ವಂಚನೆ ಬಗ್ಗೆಯೂ ಮಾಹಿತಿ ನೀಡಲಾಯಿತು.ಮನೆಗಳ್ಳತನ,ಸರಗಳ್ಳತನ,ಸಂಚಾರ ನಿಯಮಗಳನ್ನ ಪಾಲಿಸುವ ಕುರಿತಾಗಿ ಜಾಗೃತಿ ಮೂಡಿಸಲಾಯಿತು.ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಕುವೆಂಪುನಗರ ಠಾಣಾ ವ್ಯಾಪ್ತಿಯ ನೂರಾರು ಹಿರಿಯ ನಾಗರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆದುಕೊಂಡರು…