
ಪತಿಯ ಅನೈತಿಕ ಸಂಭಂಧ…ಪತ್ನಿ ಅನುಮಾನಾಸ್ಪದ ಸಾವು…ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…ಕೊಲೆ ಆರೋಪ…ಪತಿ,ಪ್ರಿಯತಮೆ,ಸಂಭಂಧಿಕರ ವಿರುದ್ದ ದೂರು…UDR ದಾಖಲು…
- TV10 Kannada Exclusive
- December 16, 2024
- No Comment
- 197

ಮೈಸೂರು,ಡಿ16,Tv10 ಕನ್ನಡ
ಪತಿಯ ಅನೈತಿಕ ಸಂಭಂಧದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೈಸೂರು ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೂರ ಗ್ರಾಮದಲ್ಲಿ ನಡೆದಿದೆ.ಗೃಹಿಣಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಸಂಭಂಧಿಕರು ಪತಿ,ಪ್ರಿಯತಮೆ ಹಾಗೂ ಇಬ್ಬರು ಸಂಭಂಧಿಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ತೆನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.ಸಧ್ಯ ಜಯಪುರ ಪೊಲೀಸ್ ಠಾಣೆಯಲ್ಲಿ UDR ದಾಖಲಾಗಿದೆ.
ನಂಜನಗೂಡು ತಾಲೂಕು ಗೌಡರಹುಂಡಿ ಗ್ರಾಮದ ಸರೋಜಮ್ಮ ಮೃತ ದುರ್ದೈವಿ.35 ವರ್ಷದ ಹಿಂದೆ ಮಾರ್ಬಳ್ಳಿ ಗ್ರಾಮದ ದೇವಣ್ಣ ರನ್ನ ಸರೋಜಮ್ಮ ಮದುವೆ ಆಗಿದ್ದರು.ಮೂರು ಮಕ್ಕಳೊಂದಿಗೆ ಅನ್ಯೋನ್ಯ ಸಂಸಾರ ನಡೆಸಿದ ಸರೋಜಮ್ಮಗೆ ದೂರ ಗ್ರಾಮದ ಪ್ರೇಮಾ ಎಂಬಾಕೆ ನಿದ್ದೆ ಕೆಡಿಸಿದ್ದಳು.ಪ್ರೇಮಾ ಜೊತೆ ಅನೈತಿಕ ಸಂಭಂಧ ಬೆಳೆಸಿದ್ದ ದೇವಣ್ಣ ಪತ್ನಿಯನ್ನ ನಿರಾಕರಿಸಿದ್ದನೆಂದು ಹೇಳಲಾಗಿದೆ.ಹತ್ತು ವರ್ಷಗಳಿಂದ ಬೆಳೆದ ಅನೈತಿಕ ಸಂಭಂಧ ಸರೋಜಮ್ಮ ಸಂಸಾದಲ್ಲಿ ಬಿರುಕು ಕಾಣಿಸಿಕೊಂಡಿದೆ.ಈ ಬಗ್ಗೆ ಆಗಾಗ್ಗೆ ಜಗಳಗಳು ನಡೆದಿದೆ.ಹಿರಿಯರ ಸಮ್ಮುಖದಲ್ಲಿ ಬುದ್ದಿವಾದ ಹೇಳಲಾಗಿದೆ.ಹೀಗಿದ್ದೂ ಬದಲಾಗದ ದೇವಣ್ಣ ತನ್ನ ಚಾಳಿ ಮುಂದುವರೆಸಿದ್ದಾನೆ.ಡಿ.10 ರಂದು ಸರೋಜಮ್ಮಳನ್ನ ದೇವಣ್ಣ ತನ್ನ ಪ್ರಿಯತಮೆ ಪ್ರೇಮಾ ಮನೆಗೆ ಕರೆದೊಯ್ದಿದ್ದಾನೆ.ಅಲ್ಲಿಯೂ ಸಹ ಇದೇ ವಿಚಾರದಲ್ಲಿ ಜಗಳ ನಡೆದಿದೆ.ಗಂಡನ ವರ್ತನೆಯಿಂದ ಬೇಸತ್ತ ಸರೋಜಮ್ಮ ಮನೆ ಬಿಟ್ಟಿದ್ದಾಳೆ.ಆದ್ರೆ ಗೌಡರಹುಂಡಿ ಗ್ರಾಮಕ್ಕೆ ಹಿಂದಿರುಗಿಲ್ಲ.ಮರುದಿನ ಸರೋಜಮ್ಮ ಮನೆಯವರು ಜಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.
ಮರುದಿನ ದೂರ ಗ್ರಾಮದ ಜಮೀನಿನ ಮರವೊಂದರಲ್ಲಿ ಸರೋಜಮ್ಮ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಶಂಕೆ ಸರೋಜಮ್ಮ ಸಂಭಂಧಿಕರ ಆರೋಪವಾಗಿದೆ.ದೇವಣ್ಣ,ಪ್ರೇಮಾ,ಸಂಭಙಧಿಕರಾದ ಸತೀಶ,ಮಾದಪ್ಪ ಸೇರಿ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ದೂರು ನೀಡಿದ್ದಾರೆ.ಈ ಸಂಭಂಧ ಜಯಪುರ ಪೊಲೀಸ್ ಠಾಣೆಯಲ್ಲಿ UDR ದಾಖಲಾಗಿದೆ.ಆದ್ರೆ ಸರೋಜಮ್ಮ ಸಹೋದರ ಚಂದ್ರಶೇಖರ್ ರವರು ಕೊಲೆ ಆರೋಪ ಹೊರೆಸಿದ್ದು ಹೆಚ್ಚಿನ ತೆನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ರವರಿಗೆ ದೂರು ನೀಡಿದ್ದಾರೆ.ಘಟನೆ ನಡೆದ ಸ್ಥಳದಲ್ಲಿ ಮೊಬೈಲ್ ಟವರ್ ಲೊಕೇಷನ್ ಸಹಾಯದಿಂದ ಸುಳಿವು ಪಡೆದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ…