ಭೂಗಳ್ಳರಿಗೆ ಶಾಕ್…25 ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ವಶಕ್ಕೆ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ…
- TV10 Kannada Exclusive
- December 20, 2024
- No Comment
- 417
ಮೈಸೂರು,ಡಿ20,Tv10 ಕನ್ನಡ
ನಕಲಿ ದಾಖಲೆ ಸೃಷ್ಟಿಸಿಕೊಂಡು ಸರ್ಕಾರಿ ಜಮೀನು ಕಬಳಿಸಿದ್ದ ಭೂಗಳ್ಳರಿಗೆ ಜಿಲ್ಲಾಡಳಿತ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.25 ಕೋಟಿ ಬೆಲೆ ಬಾಳುವ 5 ಎಕ್ರೆ 20 ಗುಂಟೆ ಜಮೀನನ್ನ ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾಧಿಕಾರಿಗಳ ನ್ಯಾಯಾಲಯದ ಪ್ರಕರಣ ಸಂಖ್ಯೆ RP-64/2024 ದಿನಾಂಕ 03-12-2024 ರ ತೀರ್ಪಿನಂತೆ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಇಂದು ತಮ್ಮ ಸಿಬ್ಬಂದಿಗಳ ಸಮೇತ ಕಾರ್ಯಾಚರಣೆ ನಡೆಸಿ ಜಮೀನನ್ನ ವಶಕ್ಕೆ ಪಡೆದಿದ್ದಾರೆ.ಮೈಸೂರು ತಾಲೂಕು, ಜಯಪುರ ಹೋಬಳಿ, ಕೇರ್ಗಳ್ಳಿ ಗ್ರಾಮದ ಸರ್ವೆ ನಂಬರ್ 60 ರಲ್ಲಿ 5-20 ಗುಂಟೆ ಸರ್ಕಾರಿ ಜಮೀನನ್ನು ಜೂಲೇಗೌಡ ಎಂಬುವವರು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಸಿಕೊಂಡಿದ್ದರು.ಈ ಸಂಭಂಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಾದ ವಿವಾದ ನಡೆಯಿತು.ಸದರಿ ಜಮೀನು ಸರ್ಕಾರಕ್ಕೆ ಸೇರಿದ್ದ ಬಗ್ಗೆ ಖಚಿತವಾದ ಹಿನ್ನಲೆ ವಶಕ್ಕೆ ಪಡೆಯುವಂತೆ ನೀಡಿದ ತೀರ್ಪಿನಂತೆ ಇಂದು ಕಾರ್ಯಾಚರಣೆ ನಡೆಸಿ ಜಮೀನನ್ನ ವಶಪಡಿಸಿಕೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಚಿಕ್ಕಣ್ಣ, ಪೊಲೀಸ್ Dy.SP ಕರೀಂ ರಾವತರ್, ಪೊಲೀಸ್ ಸಬ್-ಇನ್ಸ್ಪೆಕ್ಟರ್ ಪ್ರಕಾಶ್ ಇತ್ತಿಮನಿ, ಉಪ ತಹಸಿಲ್ದಾರ್ ಕೆ.ಎಸ್.ಕುಬೇರ, ರಾಜಸ್ವ ನಿರೀಕ್ಷಕ ಸಿ. ವಿ.ಲೋಹಿತ್, ಹಾಗೂ ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು…