ಅಪರಾಧ ತಡೆ ಮಾಸಾಚರಣೆ…ಮಹಿಳೆಯರಿಗೆ ಅರಿವು…ಅಪರಾಧಗಳ ಕುರಿತು ಕಾರ್ಯಾಗಾರ…
- TV10 Kannada Exclusive
- December 19, 2024
- No Comment
- 192
ಮೈಸೂರು,ಡಿ19,Tv10 ಕನ್ನಡ
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರು ನಗರ ಪೊಲೀಸ್ ವತಿಯಿಂದ ವಿಜಯನಗರ ಉಪವಿಭಾಗ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಅಪರಾಧಗಳ ಕುರಿತ ಕಾನೂನು ಕಾರ್ಯಾಗಾರ
ಏರ್ಪಡಿಸಲಾಗಿತ್ತು.ಕೆ.ಆರ್.ಎಸ್.ರಸ್ತೆಯಲ್ಲಿರುವ ಗೋವಿಂದರಾವ್ ಮೆಮೋರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ನೂರಾರು ಮಹಿಳೆಯರು ಕಾನೂನಿನ ಬಗ್ಗೆ ಮಾಹಿತಿ
ಪಡೆದುಕೊಂಡರು.ಮಹಿಳೆಯರ ವಿರುದ್ದ ನಡೆಯುತ್ತಿರುವ ಶೋಷಣೆ,ದೌರ್ಜನ್ಯ,ಲೈಂಗಿಕ ಕಿರುಕುಳ,ವರದಕ್ಷಿಣೆ ಕಿರುಕುಳ,ಆನ್ ಲೈನ್ ವಂಚನೆ ಸೇರಿದಂತೆ ಹಲವು ಕಾನೂನುಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಅಪರಾಧ ಮತ್ತು ಸಂಚಾರಿ ಡಿಸಿಪಿ ರವರಾದ ಜಾಹ್ನವಿ, ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಗಜೇಂದ್ರ ಪ್ರಸಾದ್,ಸೆನ್ ವಿಭಾಗದ ಎಸಿಪಿ ಸ್ನೇಹಾ ರಾಜ್,ವಕೀಲರಾದ ಸಾವಂತ್,ಮೇಟಗಳ್ಳಿ ಠಾಣೆಯ ಇನ್ಸ್ಪೆಕ್ಟರ್ ದಿವಾಕರ್,ಹೆಬ್ಬಾಳ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಲ್ಲೇಶ್,ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಕುಮಾರ್,ಜಿಎಸ್ ಎಸ್ ಎಸ್ ಕಾಲೇಜು ಪ್ರಾಚಾರ್ಯರು,ಕಾರ್ಯದರ್ಶಿ ಸೇರಿದಂತೆ ಹಲವರು ಭಾಗಿಯಾಗಿದ್ದರು…