ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ…ಮಹಿಳೆಯ ವಿಡಿಯೋ ಚಿತ್ರೀಕರಣ ಆರೋಪ…ಡಿಪೋ ಮ್ಯಾನೇಜರ್ ಗೆ ದೂರು…
- TV10 Kannada Exclusive
- December 21, 2024
- No Comment
- 146
ನಂಜನಗೂಡು,ಡಿ21,Tv10 ಕನ್ನಡ
ಮಹಿಳಾ ಪ್ರಯಾಣಿಕರೊಂದಿಗೆ ಕೆಎಸ್ ಆರ್ ಟಿಸಿ ಬಸಿ ನಿರ್ವಾಹಕನ ವಿರುದ್ದ ಸಂಘಟಕರು ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ KA59 F 0879 ನ ಚಾಲಕ ಹಾಗೂ ನಿರ್ವಾಹಕ ಮಂಜುನಾಥ್ ವಿರುದ್ದ ದೂರು ನೀಡಲಾಗಿದೆ.ಮಹಿಳೆಯೊಬ್ಬರೊಂದಿಗೆ ಮಾತನಾಡುವಾಗ ಅಶ್ಲೀಲ ಪದ ಬಳಸಿ ಆಕೆಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ದಿನಾಂಕ 20-12-2024 ರಂದು ಸರ್ಕಾರಿ ಬಸ್ ಹೆಡಿಯಾಲ ಸಮೀಪ ನಿಳಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗ ಸಾಗಿದೆ.ಬಸ್ ಗಾಗಿ ಕಾದಿದ್ದ ಶಾಲೆ ಸಿಬ್ಬಂದಿ ನಾಗಮ್ಮ ರವರು ನಿಲ್ಲಿಸುವಂತೆ ಕೈ ತೋರಿಸಿದ್ದಾರೆ.ಚಾಲಕ ಸ್ವಲ್ಪದೂರ ಸಾಗಿ ಬಸ್ ನಿಲ್ಲಿಸಿದ್ದಾನೆ.ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಎಂದು ಪರಿಗಣಿಸದೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾನೆ.ನಂತರ ಬಸ್ ನಿಂತವ ಮೇಲೆ ನಾಗಮ್ಮ ರವರ ಫೋಟೋ ಮತ್ತು ವಿಡಿಯೋ ಗಳನ್ನ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.ಈ ವಿಚಾರವನ್ನ ನಾಗಮ್ಮ ತಮ್ಮ ಪತಿ ಮಹದೇವಸ್ವಾಮಿಗೆ ತಿಳಿಸಿದ್ದಾರೆ.ಕೂಡಲೇ ಸಂಘಟಕರ ನೆರವಿನಿಂದ ಮಹದೇವಸ್ವಾಮಿ ನಂಜನಗೂಡು ಘಟಕದ ಬಸ್ ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.ಮಂಜುನಾಥ್ ಗೆ ಚಾಲಕರೂ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು ಇಬ್ಬರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸಧ್ಯ ಡಿಪೋ ಮ್ಯಾನೇಜರ್ ಮಂಜುನಾಥ್ ರವರ ಮೊಬೈಲ್ ವಶಕ್ಕೆ ಪಡೆದಿದ್ದಾರೆ.ಪರಿಶೀಲನೆ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ…