ಚಾಕುವಿನಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಆರೋಪಿಗಳಿಗಾಗಿ ಶೋಧ…
- TV10 Kannada Exclusive
- December 23, 2024
- No Comment
- 12
ಮೈಸೂರು,ಡಿ23,Tv10 ಕನ್ನಡ
ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ
ಮೈಸೂರು ಹೊರವಲಯದ ಬೆಲವತ್ತ ಗ್ರಾಮದಲ್ಲಿ ನಡೆದಿದೆ.
ಹನುಮಂತು (57) ಕೊಲೆಯಾದ ವ್ಯಕ್ತಿ.
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದ್ವೇಷ ಹಿನ್ನೆಲೆ ಕೊಲೆ ನಡೆದಿರುವ ಶಂಕೆ.
ನೆನ್ನೆ ರಾತ್ರಿ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಂತಕರು ಕೃತ್ಯ ಎಸಗಿದ್ದಾರೆ.
ರಿಯಲ್ ಎಸ್ಟೇಟ್ ವೃತ್ತಿ ನಡೆಸುತ್ತಿದ್ದ ಹನುಮಂತು
ತಮ್ಮ ಜಮೀನು ಮಾರಾಟ ಸಂಬಂಧ ಕೆಲವರೊಂದಿಗೆ ವೈಮನಸ್ಯ ಹೊಂದಿದ್ದರೆಂದು ಹೇಳಲಾಗಿದೆ.
ಆರೋಪಿಗಳ ಪತ್ತೆಗೆ
ಮೇಟಗಳ್ಳಿ ಠಾಣೆ ಪೊಲೀಸರು ಜಾಲ ಬೀಸಿದ್ದಾರೆ…