
ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿಧ್ಯಾರ್ಥಿ ಸಾವು ಪ್ರಕರಣ…ಎಚ್ಚೆತ್ತ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ…ಮುನ್ನೆಚ್ಚರಿಕೆ ವಹಿಸುವಂತೆ ಸುತ್ತೋಲೆ…
- TV10 Kannada Exclusive
- January 5, 2025
- No Comment
- 23
ಬೆಂಗಳೂರು,ಜ5,Tv10 ಕನ್ನಡ
ಗುಂಡ್ಲುಪೇಟೆ ತಾಲೂಕು ಬೇಗೂರಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿಧ್ಯಾರ್ಥಿ ಸಾವನ್ನಪ್ಪಿದ ಘಟನೆ ನಂತರ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಎಚ್ಚೆತ್ತುಕೊಂಡಿದೆ.ತಮ್ಮ ವ್ಯಾಪ್ತಿಗೆ ಬರುವ ವಸತಿಶಾಲೆಗಳ ಪ್ರಾಂಶುಪಾಲರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸುತ್ತೋಲೆ ಹೊರಡಿಸಿದೆ.ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ರಾತ್ರಿ ಪಾಳಿಯಲ್ಲಿ ನಿರ್ವಹಿಸುವ ಕಾವಲುಗಾರರ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದೆ.ಇಡೀ ರಾತ್ರಿ ಕಾವಲುಗಾರ ಎಚ್ಚರವಿದ್ದು ಗಸ್ತು ತಿರುಗುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ,ವಿಧ್ಯಾರ್ಥಿಗಳ ಚಲನವಲನಗಳ ಬಗ್ಗೆ ನಿಗಾವಹಿಸುವ ಬಗ್ಗೆ,ತುರ್ತು ಸಂಧರ್ಭದಲ್ಲಿ ಕಾವಲುಗಾರರು ಕೈಗೊಳ್ಳಬೇಕಾದ ಬಗ್ಗೆ ತಿಳುವಳಿಕೆ ನೀಡುವುದು,ಕಾವಲುಗಾರರ ಮೇಲೆಯೂ ಹೆಚ್ಚಿನ ನಿಗಾ ವಹಿಸುವುದು ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಸಂಘ ಮುನ್ನೆಚ್ಚರಿಕೆ ವಹಿಸುವಂತೆ ಖಡಕ್ ಸೂಚನೆ ನೀಡಿದೆ…