
ಮೂರು ತಲೆಮಾರುಗಳಿಂದ ವಾಸವಿದ್ದ 4 ಕುಟುಂಬ ಬೀದಿಪಾಲು ಪ್ರಕರಣ…ತಾಲೂಕು ಆಡಳಿತ ಸ್ಪಂದನೆ…
- TV10 Kannada Exclusive
- January 6, 2025
- No Comment
- 33

ನಂಜನಗೂಡು,ಜ6,Tv10 ಕನ್ನಡ

ಮೂರು ತಲೆಮಾರುಗಳಿಂದ ವಾಸವಿದ್ದ ಹಂದಿಜೋಗಿ ಜನಾಂಗದ 4 ಕುಟುಂಬವನ್ನ ರಾತ್ರೋರಾತ್ರಿ ಬೀದಿಪಾಲು ಮಾಡಿದ ಪ್ರಕರಣಕ್ಕೆ ನಂಜನಗೂಡು ತಾಲೂಕು ಆಡಳಿತ ಸ್ಪಂದಿಸಿದೆ.ಜಮೀನಿನ ಮಾಲಿಕ ಶಿವಾನಂದ ಮತ್ತು ಬಿಳಿಗೆರೆ ಪೊಲೀಸ್ ಠಾಣೆ ಪಿಎಸ್ಐ ಅಮಾನತಿಗಾಗಿ ಒತ್ತಡ ಹೇರಲಾಗಿದೆ.ನಂಜನಗೂಡು ತಾಲೂಕು ಹೊರಳವಾಡಿ ಹೊಸೂರು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ವಾಸವಿದ್ದ ಮನೆಗಳನ್ನ ತೆರುವುಗೊಳಿಸಿದ ಪರಿಣಾಮ ದಾರಿ ಕಾಣದೆ 4 ಕುಟುಂಬ ಬೀದಿಯನ್ನೇ ಆಶ್ರಯಿಸಿದೆ ನ್ಯಾಯ ದೊರೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದೆ.ಈ ಮಾಹಿತಿ ಅರಿತ ನಂತರ ನೊಂದ ಕುಟುಂಬದ ಬಳಿ ಜನಪ್ರತಿನಿಧಿಗಳು ಸಂತ್ರಸ್ಥ ಕುಟುಂಬದವರನ್ನ ಭೇಟಿ ಮಾಡಿದ್ದಾರೆ.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬಿಜೆಪಿ ಪಕ್ಷದ ಮಾಜಿ ಮಂತ್ರಿ ಎನ್ ಮಹೇಶ್ ಭೇಟಿ ನೀಡಿದ್ದಾರೆ.ಸಂತ್ರಸ್ಥರಿಂದ ಮಾಹಿತಿ ಪಡೆದ ಮಹೇಶ್ ತಹಸೀಲ್ದಾರ್ ಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ನಂಜನಗೂಡಿನ ತಹಸಿಲ್ದಾರ್ ಶಿವಕುಮಾರ್ ಕಾಸನೂರು ಇ ಓ ಜೆರಾಲ್ಡ್ ರಾಜೇಶ್ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾಯ ವಡ್ಡರ್ ಸೇರಿದಂತೆ ತಾಲೂಕು ಮಟ್ಟದ ಸಾಕಷ್ಟು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬೀದಿಪಾಲು ಮಾಡಿದವರ ವಿರುದ್ದ ಕಾನೂನು ಬದ್ಧವಾಗಿ ಅಟ್ರಾಸಿಟಿ ಪ್ರಕರಣ ದಾಖಲಾಗಿ ನಮ್ಮ ಭೂಮಿ ನಮಗೆ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದು ನೊಂದ ಕುಟುಂಬಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ಹಂದಿ ಜೋಗಿ ಕುಟುಂಬಸ್ಥರಿಗೆ ಸೂಕ್ತವಾದ ನ್ಯಾಯ ಒದಗಿಸಿ ಕೊಡದಿದ್ದಲ್ಲಿ ನಾನೇ ಸಂತ್ರಸ್ಥರ ಜೊತೆ ಕುಳಿತು ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎನ್ ಮಹೇಶ್ ಎಚ್ಚರಿಸಿದ್ದಾರೆ…