
ನಡು ರಸ್ತೆಯಲ್ಲಿ ಸುಟ್ಟು ಭಸ್ಮವಾದ ಕಾರು…ಪ್ರಯಾಣಿಕರು ನಾಪತ್ತೆ…ಹುರಳಿ,ರಾಗಿ ಒಕ್ಕಣೆ ಎಫೆಕ್ಟ್…?
- TV10 Kannada Exclusive
- January 7, 2025
- No Comment
- 160
ಸರಗೂರು,ಜ7,Tv10 ಕನ್ನಡ
ನಡುರಸ್ತೆಯಲ್ಲಿ ಕಾರು ಸುಟ್ಟು ಕರುಕಲಾದ ಘಟನೆ ಸರಗೂರು ತಾಲೂಕಿನ ಯಶವಂತಪುರ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.ಕೆ.ಆರ್.ನಗರಕ್ಕೆ ಸೇರಿದ ಕಾರು ಎಂದು ಹೇಳಲಾಗಿದೆ.ರಸ್ತೆ ಮಧ್ಯೆ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿರುವ ಹಿನ್ನಲೆ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.ಕಾರಿಗೆ ಒಕ್ಕಣೆ ಮಾಡುವ ಸತ್ತೆ ಸಿಲುಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.ಮಧ್ಯರಾತ್ರಿ ವೇಳೆ ಘಟನೆ ನಡೆದ ಕಾರಣ ಕಾರಿನಲ್ಲಿದ್ದ ಪ್ರಯಾಣಿಕರು ಅಸಹಾಯಕರಾಗಿದ್ದಾರೆ.ಬೆಂಕಿ ಇಡೀ ಕಾರನ್ನೇ ಸುಟ್ಟು ಭಸ್ಮ ಮಾಡಿದೆ.ಘಟನೆ ನಡೆದ ನಂತರ ಒಕ್ಕಣೆ ಮಾಡಿರುವ ಕುರುಹನ್ನ ಅಳಿಸಿಹಾಕುವ ಯತ್ನ ನಡೆದಿದೆ.ಸಧ್ಯ ರಾಜ್ಯ ಹೆದ್ದಾರಿಯಲ್ಲಿ ಕಾರು ಅನಾಥವಾಗಿ ಸುಟ್ಟು ಕರುಕಲಾದ ಸ್ಥಿತಿಯಲ್ಲಿ ನಿಂತಿದೆ…