ನಜರಬಾದ್ ಠಾಣೆ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…7 ಲಕ್ಷ ಮೌಲ್ಯದ 12 ವಾಹನ ವಶ…
- TV10 Kannada Exclusive
- January 8, 2025
- No Comment
- 330
ಮೈಸೂರು,ಜ8,Tv10 ಕನ್ನಡ
ದ್ವಿಚಕ್ರವಾಹನಗಳನ್ನ ಕಳುವು ಮಾಡುತ್ತಿದ್ದ ಓರ್ವ ಖದೀಮನನ್ನ ಬಂಧಿಸುವಲ್ಲಿ ನಜರಬಾದ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 7 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.ನಂಜನಗೂಡಿನ ಕಾರ್ತಿಕ್ (21) ಬಂಧಿತ ಆರೋಪಿ.ಈ ಮೂಲಕ ನಜರಬಾದ್ ಠಾಣಾ ವ್ಯಾಪ್ತಿಯ 5,ಆಲನಹಳ್ಳಿ ಪೊಲೀಸ್ ಠಾಣೆಯ 4,ಕೆ.ಆರ್.ಪೊಲೀಸ್ ಠಾಣೆಯ 1,ನಂಜನಗೂಡು ಠಾಣೆಯ 1 ಪ್ರಕರಣಗಳು ಪತ್ತೆಯಾದಂತಾಗಿದೆ.ಆರೋಪಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು ಕಳ್ಳತನಕ್ಕೆ ಇಳಿದಿದ್ದ.ನಕಲಿ ಕೀ ಬಳಸಿ ವಾಹನಗಳನ್ನ ಕಳುವು ಮಾಡುತ್ತಿದ್ದ.ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳನ್ನ ಗಿರವಿ ಇಟ್ಟು ನಾಪತ್ತೆಯಾಗುತ್ತಿದ್ದ.
ದ್ವಿಚಕ್ರವಾಹನ ಕಳವು ಆರೋಪಿಯನ್ನ ಸೆರೆಹಿಡಿಯಲು ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ಮಾರ್ಗದರ್ಶನದಲ್ಲಿ,ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ,ನಜರಬಾದ್ ಠಾಣೆ ನಿರೀಕ್ಷಕರಾದ ಮಹದೇವಸ್ವಾಮಿ,ಉಪನಿರೀಕ್ಷಕರಾದ ಶ್ರೀನಿವಾಸ್ ಪಾಟೀಲ್,ನಟರಾಜ್, ಸಿಬ್ಬಂದಿಗಳಾದ ಪ್ರಕಾಶ್,ಸತೀಶ್ ಕುಮಾರ್,ರಮೇಶ್,ಸಂಜು ಎಂ ವೆಂಕಟೇಶ್,ಮೊಹಮದ್ ಇಸ್ಮಾಯಿಲ್,ಪಿಎಸ್ಸೈ ಚಂದ್ರಶೇಖರ್ ರಾವ್,ಪ್ರದೀಪ್,ಕುಮಾರ್ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.ಆರೋಪಿ ಸೆರೆ ಹಿಡಿದ ತಂಡಕ್ಕೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಶ್ಲಾಘಿಸಿದ್ದಾರೆ…