ಜೈಲಿನಲ್ಲಿ ಬೇಕರಿ ಎಸೆನ್ಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣ…ಮತ್ತೊಬ್ಬ ಖೈದಿ ಸಾವು…ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ…
- TV10 Kannada Exclusive
- January 8, 2025
- No Comment
- 51
ಮೈಸೂರು,ಜ8,Tv10 ಕನ್ನಡ
ಬೇಕರಿ ಎಸ್ಸೆನ್ಸ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮೂವವರು ಖೈದಿಗಳು ಸಾವನ್ನಪ್ಪಿದ್ದಾರೆ.ನಿನ್ನೆ ಓರ್ವ ಸಾವನ್ನಪ್ಪಿದ್ದು ಇಂದು ಬೆಳಿಗ್ಗೆ ಮತ್ತೊಬ್ಬ ಖೈದಿ ಸಾವನ್ನಪ್ಪಿದ್ದರು ಇದೀಗ ಮೂರನೇ ಖೈದಿ ರಮೇಶ್ ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಮೂವರು ಖೈದಿಗಳು ಸಾವನ್ನಪ್ಪಿದ್ದಾರೆ.ಖೈದಿಗಳ ಸಾವಿನ ಹಿನ್ನಲೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ.ಮೂವರು ಖೈದಿಗಳೂ ಸಹ ಸಜಾ ಶಿಕ್ಷೆವಾನುಭವಿಸುತ್ತಿದ್ದವರು ಎಂದು ಹೇಳಲಾಗಿದೆ.ವಿಷಕಾರಿಕ ಅಂಶದ ವಸ್ತುಗಳನ್ನ ಖೈದಿಗಳಿಗೆ ಸುಲಭವಾಗಿ ಸಿಗುವಂತ ವ್ಯವಸ್ಥೆ ಬಗ್ಗೆ ಅನುಮಾನಗಳು ಎದ್ದಿವೆ.ಹೊಸವರ್ಷದ ಸಂಭ್ರಮಕ್ಕೆ ಕಿಕ್ ಏರಲು ಎಸೆನ್ಸ್ ಸೇವಿಸಿದ್ದಾರೆಂದು ಹೇಳಲಾಗುತ್ತಿದೆ.ಆದ್ರೆ ಅಷ್ಟು ಪ್ರಮಾಣದ ಎಸೆನ್ಸ್ ಇವರ ಕೈಗೆ ಸಿಕ್ಕಿದಾದ್ರೂ ಹೇಗೆ…? ಜೈಲು ಅಧಿಕಾರಿಗಳ ನಿರ್ಲಕ್ಷ್ಯತೆ ಇಲ್ಲಿ ಎದ್ದು ಕಾಣುತ್ತಿದೆ.ಸಧ್ಯ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೇಲ್ನೋಟಕ್ಕೆ ಹೊಟ್ಟೆನೋವು ಎಂದು ಹೇಳುತ್ತಿದ್ದಾರೆ.ಎಫ್.ಎಸ್.ಎಲ್.ವರದಿ ಬಂದ ನಂತರವಷ್ಟೇ ಪಕ್ಕಾ ಮಾಹಿತಿ ಎಂದು ಹೇಳುತ್ತಿದ್ದಾರೆ.ಒಟ್ಟಾರೆ ಇದು ಜೈಲು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು…