ಆಸ್ತಿವಿವಾದ…ಕಚೇರಿಗೆ ನುಗ್ಗಿ ಗೂಂಡಾ ವರ್ತನೆ…ಪೀಠೋಪಕರಣಗಳು ಲೂಟಿ…50 ಮಂದಿ ವಿರುದ್ದ FIR ದಾಖಲು…
- TV10 Kannada Exclusive
- January 9, 2025
- No Comment
- 192
ಮೈಸೂರು,ಜ8,Tv10 ಕನ್ನಡ
ಆಸ್ತಿ ವಿವಾದ ಹಿನ್ನಲೆ 40 ರಿಂದ 50 ಮಂದಿ ಕಚೇರಿಗೆ ನುಗ್ಗಿ ಗೂಂಡಾಗಳಂತೆ ವರ್ತಿಸಿ ಸಿಸಿ ಕ್ಯಾಮರಾ,ಗೇಟ್ ಗಳನ್ನ ಮುರಿದು ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನಿಸಿ ಪೀಠೋಪಕರಣಗಳೊಂದಿಗೆ ಪರಾರಿಯಾದ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಭಂಧ ಕಂಪನಿ ಮ್ಯಾನೇಜರ್ ಸಂದೀಪ್ ಎಂಬುವರು ಅಕ್ಷಯ್ ಎಂಬಾತ ಸೇರಿದಂತೆ 50 ಮಂದಿ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಡೆಸಿಫರ್ ಹೆಲ್ತ್ ರೆಕಾರ್ಡ್ ಕಂಪನಿಯು ಸರ್ವೆ ನಂ 80/A ನ 35 ಗುಂಟೆ ಪ್ರದೇಶದಲ್ಲಿ ಸ್ಥಾಪನೆಯಾಗಿದೆ.ಇದರ ಮಾಲೀಕರಾದ ವಿನಾಯಕ ಶಂಕರ್ ಹಾಗೂ ಅಕ್ಷಯ್,ಚಿತ್ರಕಲಾ ಎಂಬುವರ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ.ಹೀಗಿದ್ದ ವೇಳೆ ಅಕ್ಷಯ್ ಸುಮಾರು 40 ರಿಂದ 50 ಮಂದಿ ಗುಂಪನ್ನ ಕಟ್ಟಿಕೊಂಡು ಡಿಸೆಂಬರ್ 11 ರಂದು ನುಗ್ಗಿ ಗೂಂಡಾ ವರ್ತನೆ ಪ್ರದರ್ಶಿಸಿದ್ದಾನೆ.ಇದನ್ನ ಪ್ರಶ್ನಿಸಿದ ಮ್ಯಾನೇಜರ್ ಸಂದೀಪ್ ರನ್ನ ಕಚೇರಿಯಿಂದ ಹೊರದಬ್ಬಿ ಗೇಟ್ ಗಳನ್ನ ಸಿಸಿ ಕ್ಯಾಮರಾ ಮುರಿದುಹಾಕಿದ್ದಾನೆ.ಈ ಸಂಭಂಧ ಪೊಲೀಸರ ಗಮನಕ್ಕೆ ತರುವಷ್ಟರಲ್ಲಿ ಕಚೇರಿಯಲ್ಲಿದ್ದ ಬಹುತೇಕ ಪೀಠೋಪಕರಣಗಳನ್ನ ಹೊತ್ತೊಯ್ದಿದ್ದಾನೆ.ಏರ್ ಕಂಡೀಷನರ್,ಟೇಬಲ್ ಗಳು,ಟಿವಿ,ಐರನ್ ಪೈಪ್ ಗಳು,ಗ್ರಿಲ್ಸ್ ಗಳು,ಗೇಟ್ ಗಳು,ಕಾನ್ಫರೆನ್ಸ್ ಟೇಬಲ್ ಗಳು ಸೇರಿದಂತೆ ಹಲವು ಪೀಠೋಪಕರಣಗಳನ್ನ ಕಚೇರಿ ಸಿಬ್ಬಂದಿಗಳ ಮುಂದೆಯೇ ರಾಜಾರೋಷವಾಗಿ ಹೊತ್ತು ಪರಾರಿಯಾಗಿದ್ದಾನೆ.ಹೀಗೆ ಹಲವು ಬಾರಿ ಅಕ್ಷಯ್ ಕಚೇರಿಗೆ ಬಂದು ಗೂಂಡಾ ವರ್ತನೆ ಮಾಡಿರುವುದಾಗಿ ಮ್ಯಾನೇಜರ್ ಸಂದೀಪ್ ಆರೋಪಿಸಿದ್ದಾರೆ.ಸಧ್ಯ ಅಕ್ಷಯ್ ಹಾಗೂ 50 ಸಹಚರರ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ…