ದತ್ತ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಗೆ ಸಿದ್ದತೆ…ಬೆಳಿಗ್ಗೆ 6 ಗಂಟೆಗೆ ಉತ್ತರ ಧ್ವಾರ ದರುಶನ…
- TV10 Kannada Exclusive
- January 9, 2025
- No Comment
- 32
ಮೈಸೂರು,ಜ9,Tv10 ಕನ್ನಡ
ವೈಕುಂಠ ಏಕಾದಶಿ ಅಂಗವಾಗಿ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಶ್ರೀದತ್ತ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಉತ್ತರ ಧ್ವಾರ ದರುಶನ ಏರ್ಪಡಿಸಲಾಗಿದೆ.ಬೆಳಿಗ್ಗೆ 6 ರಿಂದ ಮಧ್ಯಾಹ್ನ 2.30 ಹಾಗೂ 3 ಗಂಟೆಯಿಂದ ರಾತ್ರಿ 9 ರವರೆಗೆ ದರುಶನ ವ್ಯವಸ್ಥೆ ಏರ್ಪಡಿಸಲಾಗಿದೆ.ಆಶ್ರಮದ ಮುಖ್ಯ ಧ್ವಾರದಿಂದ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…